
ಕೋಟ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ, ಕಲ್ಯಾಣಪುರ ಶಾಖೆ ಆಶ್ರಯದಲ್ಲಿ ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಶ್ರಮಕ್ಕೆ ಅಗತ್ಯವಸ್ತುಗಳು ಇತರ ಪರಿಕರ ಹಸ್ತಾಂತರ ಕಾರ್ಯಕ್ರಮ ಬುಧವಾರ ನಡೆಯಿತು.
ಈ ಸಂದರ್ಭದಲ್ಲಿ ಉದ್ಯಮಿ ಎಂ.ಸಿ ಚಂದ್ರಶೇಖರ್ ಅಗತ್ಯ ವಸ್ತುಗಳ ಪರಿಕರವನ್ನು ಅಪ್ಪ ಅಮ್ಮ ಅನಾಥಾಶ್ರಮದ ಮುಖ್ಯಸ್ಥ ಪ್ರಶಾಂತ್ ಪೂಜಾರಿ ಇವರಿಗೆ ಹಸ್ತಾಂತರಿಸಿದರು. ಸಾಮಾಜಿ ಚಿಂತಕ ಜೋಸೆಫ್ ರೆಬೆಲೋ, ಪತ್ರಕರ್ತ ರವೀಂದ್ರ ಕೋಟ, ಬ್ರಹ್ಮಾವರ ಶಾಖಾ ಪ್ರಭಂಧಕ ಅಭಿಷೇಕ್ ಆಚಾರ್, ಪ್ರಜ್ವಲ್ ಯಡಬೆಟ್ಟು ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಪ್ರೀತಿ ಚಿಕ್ಕರ್ ಸ್ವಾಗತಿಸಿದರು. ಕಲ್ಯಾಣಪುರ ಶಾಖಾ ಪ್ರಭಂಧಕ ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು. ಮನೀಷಾ ಡಿಸೋಜ ವಂದಿಸಿದರು.
ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ, ಕಲ್ಯಾಣಪುರ ಶಾಖೆ ಆಶ್ರಯದಲ್ಲಿ ಉದ್ಯಮಿ ಎಂ.ಸಿ ಚಂದ್ರಶೇಖರ ಪರಿಕರವನ್ನು ಅಪ್ಪ ಅಮ್ಮ ಅನಾಥಾಶ್ರಮದ ಮುಖ್ಯಸ್ಥ ಪ್ರಶಾಂತ್ ಪೂಜಾರಿ ಇವರಿಗೆ ಹಸ್ತಾಂತರಿಸಿದರು.













Leave a Reply