Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸೌಜನ್ಯ ಹತ್ಯೆ ವಿರುದ್ಧ ಹೋರಾಟಗಾರ ಮಹೇಶ್ ತಿಮ್ಮರೂಡಿ ಕೋಟ ಭೇಟಿ
ಸತ್ಯ ಗೆದ್ದೆ ಗೆಲ್ಲುತ್ತದೆ, ಧರ್ಮಸ್ಥಾನದಲ್ಲಿ ಧರ್ಮ ನೆಲೆಯೂರಲಿದೆ

ಕೋಟ: ಸೌಜನ್ಯ ಅತ್ಯಾಚಾರಿಗಳಿಗೆ ಶಿಕ್ಷೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಮಹೇಶ್ ತಿಮ್ಮರೂಡಿ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸೌಜನ್ಯ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗಾಗಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಿಮ್ಮರೂಡಿ ನಿರಂತರ ಹೋರಾಟಗಳ ಮೂಲಕ ಸಮಾಜಕ್ಕೆ ಸತ್ಯವನ್ನು ತೊರಿಸುವ ಕೆಲಸ ಮಾಡುತ್ತಿದ್ದೇವೆ, 11ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ, ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ, ಅದೆಷ್ಟೊ ಘಟನೆಗಳು ಧರ್ಮಸ್ಥಳದಲ್ಲಿ ನಡೆದಿವೆ ಹಾಗಾದರೆ ಆ ಘಟನೆಗಳ ವಿರುದ್ಧ ಹೋರಾಟ ನಡೆಸುವುದೇ ತಪ್ಪಾ ನ್ಯಾಯಕೇಳುವುದು ತಪ್ಪಾದರೆ ಈ ದೇಶದ ಕಾನೂನನ್ನು ಏಕೆ ಗಟ್ಟಿಗೊಳಿಸಿದ್ದಾರೆ.

ಧರ್ಮದ ತಳಹದಿ ಇರುವ ಕ್ಷೇತ್ರದಲ್ಲಿ ಧರ್ಮವಿರೋಧಿ ಕೃತ್ಯಗಳನ್ನು ಕೆಲವರು ಮಾಡುತ್ತಿದ್ದಾರೆ, ಇದಕ್ಕೆಲ್ಲ ಪೂರ್ಣಾಹುತಿ ಆಗಬೇಕಿದೆ,ಧರ್ಮವನ್ನು ಮಂಜುನಾಥ ಕಾಯುತ್ತಾನೆ, ಸತ್ಯವನ್ನು ಅಣ್ಣಪ್ಪ ಸ್ವಾಮೀ ಹೊರಗೆಡೆಯುತ್ತಾನೆ ಇದರ ನಂಬಿಕೆ ಮೇಲೆ ಹೋರಾಟದ ಕಾವು ಏರುತ್ತಿದೆ, ಅತ್ಯಾಚಾರಿಗಳ ರಕ್ಷಣೆ ಎಷ್ಟು ಸಮಂಜಸ,ಇದರ ಹಿಂದೆ ಕಾಣದ ಕೈಗಳು ಯಾರು, ಇದು ಈ ಹೊರಜಗ್ಗತ್ತಿಗೆ ತಿಳಿಯಬೇಕಾಗಿದೆ, ಶತಮಾನಗಳಿಂದ ಭಕ್ತಿಯನ್ನು ಇಟ್ಟು ಬರುವ ಜನರ ಭಾವನೆಗಳಮೇಲೆ ಅತ್ಯಾಚಾರ ಇಂದಿಗೂ ನಡೆಯುತ್ತಿದೆ.ನಮ್ಮ ಹೋರಾಟ ಯಾವ ಧರ್ಮಾಧಿಕಾರಿಯ ವಿರುದ್ಧ ಅಲ್ಲ ನೈಜ ಅತ್ಯಾಚಾರಿಗಳ ವಿರುದ್ಧವೇ ಹೊರತು ಯಾವ ಕ್ಷೇತ್ರದ ಮೇಲಲ್ಲಾ, ಅಲ್ಲಿನ ನ್ಯಾಯದೇವರ ಮುಖಕ್ಕೆ ಅಂಟಿದ ಕಳಂವನ್ನು ತೊರೆದುಹಾಕಿ ಪಾವಿತ್ರತ್ಯೆಯನ್ನು ಉಳಿಸುವ ನಿಟ್ಟಿನಲ್ಲಿ ನಾವುಗಳು ಅಣಿಯಾಗಿದ್ದೇವೆ,ಆರೋಪಿಗಳನ್ನು ರಕ್ಷಣೆ ಮಾಡಿದಂತವರಿಗೂ ಕಠಿಣ ಶಿಕ್ಷೆಯಾಗಬೇಕು ಎಂದರು

ಮರುತನಿಖೆ, ಬಕೆಟ್ ರಾಜಕಾರಣದ ವಿರುದ್ಧ ಆಕ್ರೋಶ
ಸರಕಾರದ ಮೇಲೆ ಭರವಸೆ ಇರಿಸಿದ್ದೇವೆ,ಒಬ್ಬಿಬ್ಬರು ಬಕೆಟ್ ಹಿಡಿಯುವ ಜೊತೆಗೆ ದೊಡ್ಡವರ ಚೇಳವಾಗಿ ಕಾರ್ಯನಿರ್ವಹಿಸುವುದು ಮೊದಲು ಬಿಡಬೇಕು ಅಂತಹ ರಾಜಕಾರಣ ಅಂತ್ಯಗೊಳಿಸಬೇಕು,ಇಲ್ಲಿಯವರೆಗೂ ಇದೇ ಆಗಿದ್ದು ಇನ್ನು ಮುಂದೆ ಈ ರೀತಿಯಾಗಬಾರದು ಸತ್ಯ ಯಾವತ್ತು ಕಹಿಯಾಗಿ ಇರುತ್ತದೆ ನಾವು 11ವರ್ಷದಿಂದ ಆಡಳಿತದಲ್ಲಿರುವರಿಗೆ ನ್ಯಾಯ ದೊರಕಿಸಲು ಕೇಳುತ್ತಿದ್ದೇವೆ.

ಆದರೆ ಅದು ಆಗಿಲ್ಲ ದೇಶದ ಉನ್ನತ ತನಿಖಾ ಸಂಸ್ಥೆ ಸಂತೋಷ್ ರಾವ್ ನಿರ್ದೋಷಿ ಎಂದು ಪ್ರಕಟಿಸಿದೆ ಪ್ರಸ್ತುತ ಸಂತೋಷ್ ರಾವ್ ಆರೋಪಿ ಅನ್ನುವವರು ಆರೋಪಿಗಳ ಸಾಲಿನಲ್ಲಿ ಇದ್ದಾರೆ. ಹಾಗಾದರೆ ಅತ್ಯಾಚಾರಿಗಳು ಯಾರು ಅದರ ಸತ್ಯಾಸ್ಯತೆಗಳು ಹೊರಬರಬೇಕು ನಮ್ಮ ಹೋರಾಟ ವಯಕ್ತಿಕ ಇಲ್ಲ ಸತ್ಯ ಹೊರ ಬಂದೇ ಬರುತ್ತದೆ ಧರ್ಮಸ್ಥಾಪನೆಗೆ ಸಮಯ ನಿಗದಿಯಾಗಿದೆ ಎಂದು ಮಹೇಶ್ ತಿಮ್ಮರೂಡಿ ಹೇಳಿದರು.
ಈ ಸಂದರ್ಭದಲ್ಲಿ ಕೋಟ ಸಾಲಿಗ್ರಾಮ ಹೋರಾಟ ಸಮಿತಿಯ ಪ್ರಮುಖರಾದ ದಿನೇಶ್ ಗಾಣಿಗ,ನಾಗರಾಜ ಗಾಣಿಗ,ಕೀರ್ತಿಶ್ ಪೂಜಾರಿ ,ಪ್ರಸಾದ್ ಬಿಲ್ಲವ,ಮತ್ತಿತರರು ಇದ್ದರು. ಮಹೇಶ್ ತಿಮ್ಮರೂಡಿ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Leave a Reply

Your email address will not be published. Required fields are marked *