Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಂಚವರ್ಣ ಸಂಸ್ಥೆಯ ಪರಿಸರ ಮಾಹಿತಿ ಕಾರ್ಯಾಗಾರ 9ನೇ ಸರಣಿ ಕಾರ್ಯಕ್ರಮ
ಪರಿಸರದ ಬಗ್ಗೆ ನಿರ್ಲಕ್ಷ್ಯ ಸಲ್ಲ – ಕಲ್ಪನಾ ಭಾಸ್ಕರ್

ಕೋಟ: ಪ್ರಸ್ತುತ ಕಾಲಘಟ್ಟದಲ್ಲಿ ಪರಿಸರದ ಬಗ್ಗೆ ನಿರ್ಲಕ್ಷ್ಯವನ್ನು ಕಾಣುತ್ತಿದ್ದೇವೆ ಇದರಿಂದ ಮುಂದಿನ ಜನಾಂಗಕ್ಕೆ ಕ್ಲಿಷ್ಟಕರ ಸಮಸ್ಯೆ ಎದಯರಾಗುವುದರಲ್ಲಿ ಸಂಶಯವೇ ಇಲ್ಲ ಈಗಿಂದಿಗಲೇ ಜಾಗೃತರಾಗುವುದು ಒಳಿತು ಎಂದು ಸಾಮಾಜಿಕ ಚಿಂತಕಿ ಕಲ್ಪನಾ ಭಾಸ್ಕರ್ ಹೇಳಿದರು.

ಕೋಟದ ಮೂಡುಗಿಳಿಯಾರು ಶಾಲೆಯಲ್ಲಿ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಗೆಳೆಯರ ಬಳಗ ಕಾರ್ಕಡ , ಗಿಳಿಯಾರು ಯುವಕ ಮಂಡಲ, ಹಂದಟ್ಟು ಮಹಿಳಾ ಬಳಗ ಆಶ್ರಯದಲ್ಲಿ 9ನೇ ಪರಿಸರ ಜಾಗೃತಿ ಕಾರ್ಯಾಗಾರ ಕಾರ್ಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪರಿಸರದಲ್ಲಿ ಮರಗಳನ್ನು ಸಾಕಷ್ಟು ಹಾನಿಗೊಳಿಸಿದ್ದೇವೆ, ಕಂಡಕಂಡಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುತ್ತಿದ್ದೇವೆ ಅದರ ಬಳಕೆ ವಿಪರೀತ ಮಾಡುತ್ತಿದ್ದೇವೆ, ಅದರಿಂದ ಬಿಸಿ ಆಹಾರ ಸೇವಿಸುತ್ತಿದ್ದೇವೆ, ಅದನ್ನು ಸುಡುವ ಕಾರ್ಯವು ಮಾಡುತ್ತಿದ್ದೇವೆ, ನೀರು,ಮಣ್ಣು ದುರ್ಬಳಕೆ ಮಾಡುತ್ತಿದ್ದೇವೆ, ವಿಷಕಾರಿ ಆಹಾರ ಸೇವಿಸುತ್ತಿದ್ದೇವೆ ಈ ಎಲ್ಲಾ ದೃಷ್ಟಿಯಿಂದ ವಾತಾವರಣ ಹಾಗೂ ಸಮಾಜ, ನಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.ಇದಾಗಬಾರದು ಎಂಬ ಬಯಕೆ ಇದ್ದರೆ ಇಂದೇ ಜಾಗೃತರಾಗಿ ಮನೆ ಮನೆಯಲ್ಲಿ ಪರಿಸರ ಕಾಳಜಿ ವಹಿಸಬೇಕು, ಗಿಡ ನಡುವ ಸಂಕಲ್ಪ ಮಾಡಿ,ಪ್ಲಾಸ್ಟಿಕ್ ಯುಕ್ತ ಆಹಾರದಿಂದ ದೂರವಿರಿ, ಪ್ಲಾಸ್ಟಿಕ್ ಬಳಕೆ ವಿತವಾಗಿರಲಿ,ಶುದ್ಧ ಗಾಳಿ,ಬೆಳಕು ನೀರಿಗಾಗಿ ಸಮೃದ್ಧ ಸಮಾಜ ಕಟ್ಟುವ ಕಾಯಕ ಇಂದಿನಿಂದಲೇ ವಿದ್ಯಾರ್ಥಿಗಳ ಮೂಲಕ ಆರಂಭಿಸಬೇಕು ಎಂದು ಕರೆ ಇತ್ತರು.

ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಉದ್ಯಮಿ ಮಹೇಶ್ ಶೆಟ್ಟಿ ಗಿಳಿಯಾರು,ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶಿವರಾಮ್ ಭಟ್, ರಮೇಶ್, ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಶೇಖರ್ ಜಿ, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಪುಷ್ಭಾ ಕೆ ಹಂದಟ್ಟು,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಯೋಗೇಂದ್ರ ಪೂಜಾರಿ ಉಪಸ್ಥಿತರಿದ್ದರು.

ಪಂಚವರ್ಣ ಮಹಿಳಾ ಮಂಡಲ ಉಪಾಧ್ಯಕ್ಷೆ ವಸಂತಿ ಹಂದಟ್ಟು ಸ್ವಾಗತಿಸಿದರು. ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ಶಕೀಲ ನಾಗರಾಜ್ ಪ್ರಸ್ತಾವನೆ ಸಲ್ಲಿಸಿದರು. ಗಿಳಿಯಾರು ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಸುರೇಶ್ ಗಿಳಿಯಾರು ವಂದಿಸಿದರು. ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

ಕೋಟದ ಮೂಡುಗಿಳಿಯಾರು ಶಾಲೆಯಲ್ಲಿ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ,ಗಿಳಿಯಾರು ಯುವಕ ಮಂಡಲ, ಹಂದಟ್ಟು ಮಹಿಳಾ ಬಳಗ ಆಶ್ರಯದಲ್ಲಿ 9ನೇ ಪರಿಸರ ಜಾಗೃತಿ ಕಾರ್ಯಾಗಾರವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ಉದ್ಘಾಟಿಸಿದರು. ಅಭ್ಯಾಗತರಾಗಿ ಉದ್ಯಮಿ ಮಹೇಶ್ ಶೆಟ್ಟಿ ಗಿಳಿಯಾರು,ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶಿವರಾಮ್ ಭಟ್, ರಮೇಶ್, ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಶೇಖರ್ ಜಿ,ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಪುಷ್ಭಾ ಕೆ ಹಂದಟ್ಟು ಇದ್ದರು.

Leave a Reply

Your email address will not be published. Required fields are marked *