Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ ರಕ್ತೇಶ್ಚರಿ ಸನ್ನಿಧಿಯಲ್ಲಿ ಶ್ರೀ ವರಮಹಾಲಕ್ಷ್ಮೀ ವಿಶೇಷ

ಕೋಟ: ಇಲ್ಲಿನ ಸಾಸ್ತಾನ ಸಮೀಪದ ಪಾಂಡೇಶ್ವರ ರಕ್ತೇಶ್ಚರಿ ಪರಿವಾರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ರಕ್ತೇಶ್ಚರಿ ದೇವಸ್ಥಾನ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಮುಂದಾಳತ್ವದಲ್ಲಿ ವೇ.ಮೂ ಚಂದ್ರ ಶಾಸ್ತ್ರೀ ಪೌರೋಹಿತ್ಯದಲ್ಲಿ ಲಕ್ಷ್ಮೀ ಹೃದಯ ಪಾರಾಯಣ, ಪಂಚದುರ್ಗಾ ದೀಪ ನಮಸ್ಕಾರ, ಸತ್ಯನಾರಾಯಣ ಪೂಜೆ, ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರಗಿತು. ನೂರಾರು ಭಕ್ತರು ಈ ಕೈಂಕರ್ಯದಲ್ಲಿ ಭಾಗಿಯಾಗಿ ಪ್ರಸಾದ ರೂಪದ ಫಲಹಾರ ಸ್ವೀಕರಿಸಿದರು. ರಕ್ತೇಶ್ಚರಿ ಬಳಗದ ಅಧ್ಯಕ್ಷ ನಾರಾಯಣ ಆಚಾರ್ ,ಬಳಗದ ಸದಸ್ಯರು ಮತ್ತಿತರರು ಇದ್ದರು.

ಇಲ್ಲಿನ ಸಾಸ್ತಾನ ಸಮೀಪದ ಪಾಂಡೇಶ್ವರ ರಕ್ತೇಶ್ಚರಿ ಪರಿವಾರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

Leave a Reply

Your email address will not be published. Required fields are marked *