
ಕೋಟ: ಡಾ.ಕೋಟ ಶಿವರಾಮ ಕಾರಂತರು ಕಲಿತ ಶಾಲೆಯಲ್ಲಿ ಗುರುತು ಚೀಟಿ ಹಾಗೂ ಬೆಲ್ಟ್ ಮತ್ತು ಸಮವಸ್ತ್ರ ವಿತರಣೆ ಮತ್ತು ಹೊಸದಾಗಿ ಒಂದನೇ ತರಗತಿಗೆ ದಾಖಲಾತಿಗೊಂಡ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂ ಠೇವಣಿ ನಿರಕು ಪತ್ರವನ್ನು ಆ.24 ರಂದು ಶಾಲೆಯಲ್ಲಿ ವಿತರಣಾ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಪಂಚಾಯತ್‍ನ ಅಧ್ಯಕ್ಷ ಸತೀಶ್ ಬಾರಿಕೆರೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಇದರ ಪ್ರವರ್ತಕ ಆನಂದ್ ಸಿ ಕುಂದರ್, ಶಾಲಾ ಹಳೆ ವಿದ್ಯಾರ್ಥಿ ನ್ಯಾಯವಾದಿ ಮಹೇಶ್ ಹಂದಟ್ಟುಕೋಟ. ವಾಹನ ಸಮಿತಿಯ ಅಧ್ಯಕ್ಷ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ,ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಹೊಳ್ಳ ಉಪಸ್ಥಿತರಿದ್ದರು.
ವಾಹನ ಸಮಿತಿ ಯ ಅಧ್ಯಕ್ಷ ಉಪೇಂದ್ರ ಸೋಮಯಾಜಿ ಒಂದನೇ ತರಗತಿಗೆ ದಾಖಲಾತಿಗೊಂಡ ಪ್ರತಿ ಮಗುವಿಗೂ ತಲಾ 1000 ರೂ. ನಗದು ಪತ್ರವನ್ನು ಹಸ್ತಾಂತರಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಅನುಶ್ರೀ ಸ್ವಾಗತಿಸಿದರು. ಉದ್ಭವಿ ಕಾರ್ಯಕ್ರಮ ನಿರೂಪಿಸಿದರು.ತಮೀಕ್ಷ ವಂದಿಸಿದರು.bಡಾ.ಕೋಟ ಶಿವರಾಮ ಕಾರಂತರು ಕಲಿತ ಶಾಲೆಯಲ್ಲಿ ಗುರುತು ಚೀಟಿ ಹಾಗೂ ಬೆಲ್ಟ್ ಮತ್ತು ಸಮವಸ್ತ್ರ ವಿತರಣಾ ಕಾರ್ಯಕ್ರಮ ಜರಗಿತು.













Leave a Reply