
ಕೋಟ: ಕೋಟ ಶ್ರೀವಿರಾಡಿಶ್ವಬ್ರಾಹ್ಮಣ ಸಮಾಜಜೋಧ್ಧಾರಕ ಸಂಘ ಸಾಲಿಗ್ರಾಮ ಶ್ರೀ ವಿಶ್ವ ಜ್ಯೋತಿ ಮಹಿಳಾ ಬಳಗದ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ ಶುಕ್ರವಾರ ಚೇಂಪಿ ಸಂಘದ ಸಭಾಂಗಣದಲ್ಲಿ ಜರಗಿತು.
ಧಾರ್ಮಿಕ ವಿಧಿವಿಧಾನವನ್ನು ಪುರೋಹಿತ ಲಕ್ಷ್ಮೀಕಾಂತ ಶರ್ಮರ ನೆರವೆರಿಸಿದರು. ಶ್ರೀ ವಿಶ್ವ ಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ಸವಿತಾ ಚಂದ್ರಶೇಖರ ಆಚಾರ್ಯ ದಂಪತಿಗಳು ಧಾರ್ಮಿ ಕೈಂಕರ್ಯದಲ್ಲಿ ಭಾಗಿಯಾದರು. ಅಪರಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜೋಧ್ಧಾರಕ ಸಂಘ ಅಧ್ಯಕ್ಷರಾದ ಮಣೂರು ಸುಬ್ರಾಯ ಆಚಾರ್ಯ, ವಿಶ್ವ ಕರ್ಮ ಕಲಾವೃಂದದ ಅಧ್ಯಕ್ಷ ವೆಂಕಟೇಶ ಆಚಾರ್ಯ, ಮೂರು ಸಂಘಗಳ ಎಲ್ಲಾ ಪದಾಧಿಕಾರಿಗಳು ಸದಸ್ಯರು , ಸಮಾಜ ಬಾಂಧವರು ಉಪಸ್ಥಿತರಿದ್ದರು.
ವಿಶ್ವಕರ್ಮ ಸಮುದಾಯದ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ ಶುಕ್ರವಾರ ಚೇಂಪಿ ಸಂಘದ ಸಭಾಂಗಣದಲ್ಲಿ ಜರಗಿತು.













Leave a Reply