
ಕೋಟ :ವಿವೇಕ ವಿದ್ಯಾಸಂಸ್ಥೆಯ ಸಾಧನೆ ಅಗಾಧವಾಗಿದೆ ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವೈಜ್ಞಾನಿಕ ಕ್ಷೇತ್ರದಲ್ಲಿ ಛಾಪನ್ನು ಮೂಡಿಸುತ್ತಿದ್ದಾರೆ ಎಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಹೇಳಿದರು.
ಅಮೃತಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಕೋಟ ವಿದ್ಯಾಸಂಘ, ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಅಮೃತ ಮಹೋತ್ಸವದ ಯೋಜನೆಗಳಾದ ಪ್ರಾಕ್ತನ ವಸ್ತುಸಂಗ್ರಹಾಲಯ, ಧನ್ವಂತರಿ ಔಷಧೀಯ ಸಸ್ಯೋದ್ಯಾನ, ನವೀಕೃತ ಶಾಂತಿ ವಿಹಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಔಪಚಾರಿಕ ಶಿಕ್ಷಣಕ್ಕೆ ಸೀಮಿತಗೊಳಿಸದೇ ಕೌಶಲ್ಯ ಪೂರಕ ಶಿಕ್ಷಣವನ್ನು ನೀಡಿ ಪಡೆದಲ್ಲಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರಲ್ಲದೆ ವಿದ್ಯಾರ್ಥಿ ಜೀವನದಲ್ಲಿ ಪ್ರೌಢಾವಸ್ಥೆ ರಚನಾತ್ಮಕ ವರ್ಷಗಳಾಗಿದ್ದು, ಮನಸ್ಸು ವಿಕಸನಗೊಳ್ಳುವ, ಜ್ಞಾನದ ತೃಷೆಯೂ ಇದ್ದು,
ಜೀವನಕ್ಕೆ ದಾರಿ ತೋರಿಸುವ ಹಂತವೂ ಆಗಿರುತ್ತದೆ ಎಂದ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯ ಉತ್ತಮವಾಗಿದ್ದಲ್ಲಿ ಸಂವಹನ ಇರುತ್ತದೆ. ಉತ್ತಮ ಸಂವಹನತೆ ಇದ್ದಲ್ಲಿ ಜ್ಞಾನ ಭಂಡಾರ ಬೆಳೆಯುತ್ತದೆ. ಇದಕ್ಕೆಲ್ಲ ಕೋಟ ವಿದ್ಯಾ ಸಂಸ್ಥೆ ಪೂರಕವಾಗಿದೆ ಎಂದು ಹೇಳಿದರು.
ಕೋಟ ವಿದ್ಯಾ ಸಂಘದ ಅಧ್ಯಕ್ಷ ಪಿ.ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಆಕಾಶ್ ಎಂಟರ್ ಪ್ರೈಸಸ್‍ನ ಆಡಳಿತ ನಿರ್ದೇಶಕ ಎಸ್.ರವೀಂದ್ರ ನಾಯಕ್, ಕಾರ್ಕಳ ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಎ.ಶ್ರೀನಿವಾಸ, ಕುಂದಾಪುರ ಯುವ ಉದ್ಯಮಿ ರಕ್ಷಿತ್ ಶೆಟ್ಟಿ, ವಿದ್ಯಾ ಸಂಘದ ಜತೆ ಕಾರ್ಯದರ್ಶಿ ಮಂಜುನಾಥ ಉಪಾಧ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂದ ಭಟ್, ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾದ ಕೆ.ಜಗದೀಶ ಹೊಳ್ಳ, ವೆಂಕಟೇಶ ಉಡುಪ, ಭಾಸ್ಕರ ಆಚಾರ್ಯ ಇದ್ದರು.
ಕೋಟ ವಿವೇಕ ಪಿಯು ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ ಸ್ವಾಗತಿಸಿದರು. ವಿದ್ಯಾ ಸಂಘದ ಕೋಶಾಧಿಕಾರಿ ವಲೇರಿಯನ್ ಮಿನೇಜಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಂದಿಸಿದರು. ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ವಿವೇಕ ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿಗಳಿಂದ ಭಾವ ಗಾನಾಮೃತ ಕಾರ್ಯಕ್ರಮ ನಡೆಯಿತು.
ಅಮೃತಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಕೋಟ ವಿದ್ಯಾಸಂಘ, ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಅಮೃತ ಮಹೋತ್ಸವದ ಯೋಜನೆಗಳಾದ ಪ್ರಾಕ್ತನ ವಸ್ತುಸಂಗ್ರಹಾಲಯ, ಧನ್ವಂತರಿ ಔಷಧೀಯ ಸಸ್ಯೋದ್ಯಾನ, ನವೀಕೃತ ಶಾಂತಿ ವಿಹಾರವನ್ನು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಉದ್ಘಾಟಿಸಿದರು. ಕೋಟ ವಿದ್ಯಾ ಸಂಘದ ಅಧ್ಯಕ್ಷ ಪಿ.ಪ್ರಭಾಕರ ಮಯ್ಯ, ಬೆಂಗಳೂರಿನ ಆಕಾಶ್ ಎಂಟರ್ ಪ್ರೈಸಸ್‍ನ ಆಡಳಿತ ನಿರ್ದೇಶಕ ಎಸ್.ರವೀಂದ್ರ ನಾಯಕ್, ಕಾರ್ಕಳ ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಎ.ಶ್ರೀನಿವಾಸ ಮತ್ತಿತರರು ಇದ್ದರು.













Leave a Reply