
ಕೋಟ: ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗುವುದಲ್ಲದೇ ಅವರಲ್ಲಿ ಆತ್ಮವಿಶ್ವಾಸವು ಮೂಡುತ್ತದೆ .ಆದ್ದರಿಂದ ಶಾಲೆಗಳಲ್ಲಿ ನಡೆಸಲಾಗುವ ವಿವಿಧ ಶೈಕ್ಷಣಿಕ ಕ್ಲಬ್‍ಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‍ನ ಅಧ್ಯಕ್ಷ ಅರವಿಂದ ಶರ್ಮ ಹೇಳಿದರು .
ಹಂಗಾರಕಟ್ಟ ಚೇತನಾ ಪ್ರೌಢಶಾಲೆ ಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಚೇತನಾ ಇಂಟರಾಕ್ಟ್ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು. ಶಾಲೆಯ ಆಡಳಿತ ಮಂಡಳಿಯ ಬಿ ಭರತ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‍ನ ಹಿರಿಯ ಸದಸ್ಯ ಇಬ್ರಾಹಿಂ ಸಾಹೇಬ್ ದೀಪ ಬೆಳಗಿಸಿ ಉದ್ಘಾಟಿಸಿದರು .
ಕಾರ್ಯದರ್ಶಿ ಕರುಣಾಕರ್ ಶೆಟ್ಟಿ, ರಾಜಾರಾಮ್ ಐತಾಳ್, ಸುಲತಾ ಹೆಗಡೆ, ಗಣೇಶ್ ಜಿ ,ರಾಮ್ ದೇವ್ ಹಂದೆ, ಇಂಟರಾಕ್ಟ್ ಅಧ್ಯಕ್ಷೆ ಕುಮಾರಿ ನಿಕಿತಾ , ಕಾರ್ಯದರ್ಶಿ ಕುಮಾರಿ ಪ್ರಣತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಶಾಲೆಯ ಮುಖ್ಯ ಶಿಕ್ಷಕಿ ಕಲ್ಪನಾ ಸ್ವಾಗತಿಸಿದರು. ಚಂದ್ರ ಧನ್ಯವಾದ ಸಮರ್ಪಿಸಿದರು. ಕು. ವೈಷ್ಣವಿ ಕು. ಪೂಜಾ ,ಲೆನಾಡ್ ಕಾರ್ಯಕ್ರಮವನ್ನು ನಿರೂಪಿಸಿದರು.
ಹಂಗಾರಕಟ್ಟೆ ಚೇತನಾ ಪ್ರೌಢಶಾಲೆ ಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಚೇತನಾ ಇಂಟರಾಕ್ಟ್ ಪದಗ್ರಹಣವನ್ನು ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‍ನ ಅಧ್ಯಕ್ಷ ಅರವಿಂದ ಶರ್ಮ ನೆರವೇರಿಸಿದರು. ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‍ನ ಹಿರಿಯ ಸದಸ್ಯ ಇಬ್ರಾಹಿಂ ಸಾಹೇಬ್ ,ಕಾರ್ಯದರ್ಶಿ ಕರುಣಾಕರ್ ಶೆಟ್ಟಿ, ಮಜಿ ಅಧ್ಯಕ್ಷ ರಾಜಾರಾಮ್ ಐತಾಳ್ ಮತ್ತಿತರರು ಇದ್ದರು.













Leave a Reply