
ಕೋಟ: ಕೊಪ್ಪಳ ಜಿಲ್ಲೆ ಸೌಹಾರ್ದ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಮತ್ತು ನಿರ್ದೇಶಕರ ತಂಡ ಇತ್ತೀಚಿಗೆ ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಶ್ರೀಧರ ಸೋಮಯಾಜಿ ಸಂಘ ಬೆಳೆದು ಬಂದ ದಾರಿ, ಕಾರ್ಯ ಚಟುವಟಿಕೆಗಳು, ಕಡತಗಳ ನಿರ್ವಹಣೆ ಬಗ್ಗೆ ವಿವರಿಸಿದರು. ಕೊಪ್ಪಳ ಜಿಲ್ಲೆ ಸೌಹಾರ್ದ ಸಹಕಾರಿ ಸಂಘಗಳ ಅಧ್ಯಕ್ಷ ನಾಗಲಿಂಗಪ್ಪ ಪತ್ತಾರ್ ಸಂಘದ ಪ್ರಗತಿ ಕಾರ್ಯ ಚಟುವಟಿಕೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಂದು ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ವಿಸ್ತರಣಾಧಿಕಾರಿ ವಿಜಯ ಮತ್ತು ಸಂಘದ ಹಿರಿಯ ಸಹಾಯಕ ಗಣೇಶ ಉಪಸ್ಥಿತರಿದ್ದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ಕೊಪ್ಪಳ ಜಿಲ್ಲೆ ಸೌಹಾರ್ದ ಸಹಕಾರಿ ಸಂಘ ಭೇಟಿ ನೀಡಿದರು.














Leave a Reply