Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಡುಕರೆ- ಮೀನಿನ ಮೌಲ್ಯವರ್ಧನೆ ಆರ್ಥಿಕ ಪ್ರಗತಿ ಎರಡು ದಿನಗ ಕಾರ್ಯಾಗಾರ ಕಾರ್ಯಕ್ರಮ

ಕೋಟ: ಕರ್ನಾಟಕ ಪಶುವೈದ್ಯಕೀಯ ,ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೀದರ, ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ರಾಷ್ಟ್ರೀಯ ಸೇವಾ ಯೋಜನೆ , ಗೀತಾನಂದ ಫೌಂಡೇಶನ್ ಮಣೂರು ಪಡುಕರೆ,ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಲಿಮಿಟೆಡ್, ಕೋಟ ಪಡುಕರೆ ಲಕ್ಷ್ಮೀಸೋಮಬಂಗೇರ ಸ.ಪ್ರ ಕಾಲೇಜು ಇವರುಗಳ ಆಶ್ರಯದಲ್ಲಿ ಮೀನಿನ ಮೌಲ್ಯವರ್ಧನೆ ಆರ್ಥಿಕ ಪ್ರಗತಿ ಕುರಿತು ಎರಡು ದಿನಗ ಕಾರ್ಯಾಗಾರ ಕಾರ್ಯಕ್ರಮ ಶನಿವಾರ ಕೋಟ ಪಡುಕರೆ ಲಕ್ಷ್ಮೀಸೋಮಬಂಗೇರ ಸ.ಪ್ರ ಕಾಲೇಜಿನ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮವನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿ ಮಾತನಾಡಿ ಮೀನಿನ ಮೌಲ್ಯವರ್ಧನೆ ಬಗ್ಗೆ ತಮ್ಮ ಫಿಶ್‍ಮಿಲ್ ನಡೆಯುವ ಮೀನಿನ ಮೌಲ್ಯವರ್ಧನೆ ಉತ್ಪಾದನೆಯಾದ ಮೀನಿನ ಪೌಡರ್, ಮೀನಿನ ಎಣ್ಣೆ, ಮೀನಿನ ಕೃಷಿ ರಸಗೊಬ್ಬರ ಮತ್ತು ಹೀಗೆ ಹತ್ತಾರು ಉತ್ಪನ್ನಗಳ ತಯಾರಿಕೆ ಬಗ್ಗೆ ಹಾಗೂ ಮಿಶ್‍ಮಿಲ್ ನಡೆದು ಬಂದ ದಾರಿ ಬಗ್ಗೆ ಸವಿವಾರವಾಗಿ ಮಾಹಿತಿ ನೀಡಿದರಲ್ಲದೆ ಉತ್ಪನ್ನದ ಗುಣಮಟ್ಟ ಮತ್ತು ಆಹಾರ ಸುರಕ್ಷಾತೆಗಾಗಿ ಆಹಾರ ಭದ್ರತಾ ಪ್ರಮಾಣ ಪತ್ರ ತೆಗೆದುಕೊಳ್ಳೋದರ ಬಗ್ಗೆ ಉಡುಪಿ ಜಿಲ್ಲಾ ಅಂಕಿತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿ ಡಾ. ಪ್ರೇಮಾನಂದ ತಿಳಿ ಹೇಳಿದರು. ಹಾಗೆಯೇ ಬ್ಯಾಂಕ್ ಸಾಲ ಮತ್ತು ಸರಕಾರಿ ಸಬ್ಸಿಡಿ ಯೋಜನೆ ಬಗ್ಗೆ ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ ಪ್ರಭಂಧಕ ಪಿ.ಎಮ್. ಪಿಂಜರ್ ಅವರು ಮಾಹಿತಿ ನೀಡಿದರು

ಲ. ಸೋ, ಬಂ. ಸ. ಪ್ರ. ದ.ಕಾಲೇಜು, ಕೋಟ-ಪಡುಕರೆ ಪ್ರಾಂಶುಪಾಲೆ ಡಾ. ಸುನೀತಾ ವಿ ,ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ಲಿಮಿಟೆಡ್ ಅಧ್ಯಕ್ಷ ಲೋಹಿತ್ ಖಾರ್ವಿ,ತೋಳಾರ್ ಓಷಿಯನ್ ಪ್ರಾಡೆಕ್ಟ್ ಪ್ರದಾನ ವ್ಯವಸ್ಥಾಪಕ ಯೋಗೀಶ್, ರಾ.ಸೇ.ಯೋ.ವಾರ್ಷಿಕ ವಿಶೇಷ ವಾರ್ಷಿಕ ಶಿಬಿರದ ಸಂಯೋಜಕಿ ಡಾ. ಮೃದುಲಾ ರಾಜೇಶ್ ಉಪಸ್ಥಿತರಿದ್ದರು.ಕಾರ್ಯಕ್ರನವನ್ನು ಪ್ರಿಯಾಂಕಾ ನಿರೂಪಿಸಿದರು, ಭೂಮಿಕಾ ಸ್ವಾಗತಿಸಿದರು. ಪ್ರಶಾಂತ್ ವಂದಿಸಿದರು. ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಲಿಮಿಟೆಡ್ ಸುದೀನ ಕೋಡಿ ಸಹಕರಿಸಿದರು.

ಮೀನಿನ ಮೌಲ್ಯವರ್ಧನೆ ಆರ್ಥಿಕ ಪ್ರಗತಿ ಕುರಿತು ಎರಡು ದಿನಗ ಕಾರ್ಯಾಗಾರವನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ ಪ್ರಭಂಧಕ ಪಿ.ಎಮ್. ಪಿಂಜರ್, ಲ. ಸೋ, ಬಂ. ಸ. ಪ್ರ. ದ.ಕಾಲೇಜು, ಕೋಟ-ಪಡುಕರೆ ಪ್ರಾಂಶುಪಾಲೆ ಡಾ. ಸುನೀತಾ ವಿ ,ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ಲಿಮಿಟೆಡ್ ಅಧ್ಯಕ್ಷ ಲೋಹಿತ್ ಖಾರ್ವಿ,ತೋಳಾರ್ ಓಷಿಯನ್ ಪ್ರಾಡೆಕ್ಟ್ ಪ್ರದಾನ ವ್ಯವಸ್ಥಾಪಕ ಯೋಗೀಶ್ ಇದ್ದರು.

Leave a Reply

Your email address will not be published. Required fields are marked *