
ಕೋಟ: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಸಾಲಿಗ್ರಾಮ ಘಟಕ, ಮಹಿಳಾ ಸಂಘಟನೆ ಸಾಲಿಗ್ರಾಮ ಸಾರಥ್ಯದಲ್ಲಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ ಇವರ ಸಹಕಾರದಲ್ಲಿ ಕರಾವಳಿ ಮೊಗವೀರ ಮಹಾಜನ ಸಂಘ ಕೋಟ ಇವರ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ಮೊಗವೀರ ಮಕ್ಕಳಿಗಾಗಿ ಮುದ್ದು ಕೃಷ್ಣ ವೇಷ ಸ್ಪರ್ಧೆ-2023 ಕರಾವಳಿ ಮೊಗವೀರ ಸಭಾಭವನ ಸಾಲಿಗ್ರಾಮ-ಗುಂಡ್ಮಿಯಲ್ಲಿ ಭಾನುವಾರ ನೇರವೇರಿತು.
ಒಟ್ಟು ಮೂರು ವಿಭಾಗದಲ್ಲಿ ಒಟ್ಟು 48 ಕೃಷ್ಣವೇಷಧಾರಿ ಮಕ್ಕಳು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೀತಾನಂದ ಫೌಂಡೇಶನ್ ಮಣೂರು ಕೋಟ ಪ್ರವರ್ತಕ ಆನಂದ್ ಸಿ ಕುಂದರ್ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋ.ಯು.ಸಂ. ಸಾಲಿಗ್ರಾಮದ ಅಧ್ಯಕ್ಷ ಕಿರಣ್ ಕುಂದರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಚಂದ್ರ ಬಂಗೇರ, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಸತೀಶ ಮರಕಾಲ, ಮಹಿಳಾ ಘಟಕದ ಅಧ್ಯಕ್ಷೆ ಶಾಲಿನಿ ವಿಜಯ ಕಾಂಚನ್, ಕಾರ್ಯದರ್ಶಿ ಕುಮಾರಿ ಸೌಜನ್ಯ, ಜಿಲ್ಲಾ ಸಮಿತಿಯ ಜಯಂತ್ ಅಮೀನ್, ಗುಲಾಬಿ ದೇವದಾಸ್ ಬಂಗೇರ, ಕರಾವಳಿ ಮೊಗವೀರ ಮಹಾಜನ ಸಂಘ ಕೋಟ ವ್ಯವಸ್ಥಾಪಕ ರಾಮ ಬಂಗೇರ,ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಗಿರಿಜಾ ಸುವರ್ಣ, ರೇವತಿ ರಾಜ್,ಶ್ರೀಮತಿ ಗೀತಾ ಭಾಸ್ಕರ್, ಶ್ರೀಮತಿ ಜ್ಯೋತಿ ಸಂತೋಷ ಉಪಸ್ಥಿತರಿದ್ದರು.
ಸ್ಪರ್ಧೆಯ ತೀರ್ಪುಗರರಾಗಿ ಸುದ್ದಿಮನೆ ಪತ್ರಿಕೆಯ ಉಪಸಂಪಾದಕ ನಟ ಉದಯ ಕನ್ಕಿಮಡಿ, ಶಿಕ್ಷಕಿ ಮಹಾಲಕ್ಷ್ಮೀ ಸೋಮಯಜಿ, ಉದಯ ಹೆಜ್ಜೆನಾದ ಬ್ರಹ್ಮಾವರ ಸಹಕರಿಸಿದರು. ಸಂಘದ ಕಾರ್ಯದರ್ಶಿ ಜಗ್ನನಾಥ್ ಅಮೀನ್ ಪ್ರಾರ್ಥಿಸಿ,ಮಾಜಿ ಅಧ್ಯಕ್ಷ ಶೇಖರ ಮರಕಾಲ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಆನಂದ ಉಪ್ಲಾಡಿ ಧನ್ಯವಾದ ಅರ್ಪಿಸಿದರು.ಕುಮಾರಿ ಸುಶ್ಮಿತಾ ಕಾರ್ಯಕ್ರಮ ನಿರೂಪಣೆ ಮಾಡಿದರು.
ಮೊಗವೀರ ಯುವ ಸಂಘ ಸಾಲಿಗ್ರಾಮ ಆಶ್ರಯದಲ್ಲಿ ಸಮುದಾಯದ ಮಕ್ಕಳಿಗಾಗಿ ಮುದ್ದು ಕೃಷ್ಣ ವೇಷ ಸ್ಪರ್ಧೆ-2023 ಕರಾವಳಿ ಮೊಗವೀರ ಸಭಾಭವನ ಸಾಲಿಗ್ರಾಮ-ಗುಂಡ್ಮಿಯಲ್ಲಿ ಭಾನುವಾರ ನೇರವೇರಿತು. ಮೋ.ಯು.ಸಂ. ಸಾಲಿಗ್ರಾಮದ ಅಧ್ಯಕ್ಷ ಕಿರಣ್ ಕುಂದರ್ ,ಸಂಘದ ನಿಕಟ ಪೂರ್ವ ಅಧ್ಯಕ್ಷ ಚಂದ್ರ ಬಂಗೇರ,ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ,ಸತೀಶ ಮರಕಾಲ,ಮಹಿಳಾ ಘಟಕದ ಅಧ್ಯಕ್ಷೆ ಶಾಲಿನಿ ವಿಜಯ ಕಾಂಚನ್ ಮತ್ತಿತರರು ಇದ್ದರು.














Leave a Reply