
ಕೋಟ: ಗಿಳಿಯಾರು ಯುವಕ ಮಂಡಲ ಗಿಳಿಯಾರು. ಇದರ ಆಶ್ರಯದಲ್ಲಿ ಹಳೆ ಆಟ ಹೊಸ ಚಿಗುರು-2023 ಹ್ವಾಯ್ ಬನಿಯೇ ಒಂದ್ ಗಳ್ಗಿ ಗಮ್ಮತ್ ಮಾಡ್ವ ಶೀರ್ಷಿಕೆಯಡಿ ಕಾರ್ಯಕ್ರಮ ಭಾನುವಾರ ಮೂಡುಗಿಳಿಯಾರು ಶಾಲಾ ಮೈದಾನದಲ್ಲಿ ಜರಗಿತು.
ಕಾರ್ಯಕ್ರಮವನ್ನು ನಿವೃತ್ತ ಅಧ್ಯಾಪಕ ಭೋಜು ಶೆಟ್ಟಿ ಉದ್ಘಾಟಿಸಿದರು. ಗಿಳಿಯಾರು ಯುವಕ ಮಂಡಲ ಗಿಳಿಯಾರು ಅಧ್ಯಕ್ಷ ಶೇಖರ್ ಜಿ ಅಧ್ಯಕ್ಷತೆ ವಹಿಸಿದ್ದರು.
ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ, ನಿವೃತ್ತ ಅಧ್ಯಾಪಕ ಸೋಮಶೇಖರ ಶೆಟ್ಟಿ, ಕೋಟ ಸಿ ಎ ಬ್ಯಾಂಕ್ ಮೂಡುಗಿಳಿಯಾರು ಶಾಖಾ ಪ್ರಭಂದಕ ಗೋಪಾಲ ಜಿ, ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಿಳಿಯಾರು,ಉಪಾಧ್ಯಕ್ಷ ಸುಭಾಷ್ ಪೂಜಾರಿ, ಕೋಟ ಗ್ರಾ.ಪಂ ಸದಸ್ಯ ಯೋಗೇಂದ್ರ ಪೂಜಾರಿ, ಯುವಕ ಮಂಡಲದ ಕಾರ್ಯದರ್ಶಿ ಜಿ. ಅಕ್ಷಯ ಕುಮಾರ್ ಸೋಮಯಾಜಿ, ಜತೆ ಕಾರ್ಯದರ್ಶಿ ರಾಘವೇಂದ್ರ ಆಚಾರ್, ಗ್ರಾಮಸ್ಥರು, ಉಪಸ್ಥಿತರಿದ್ದರು.
ಗಮನ ಸೆಳೆದ ಗ್ರಾಮೀಣ ಕ್ರೀಡೆ
ಹಳ್ಳಿಗಾಡಿನ ಕ್ರೀಡೆಯಲ್ಲಿ ವಿಶೇಷವಾಗಿ ಗಮನ ಸೆಳೆಯುವ ಹಗ್ಗಜಗ್ಗಾಟ, ಮಡಿಕೆ ಒಡೆಯುವುದು, ಮಡ್ಲ್ ನೆಯ್ಯುವುದು, ಸಂಗೀತ ಕುರ್ಚಿ, ಮೂರುಕಾಲು ಓಟ, ಗೋಣಿಚೀಲ ಓಟ, ಕಪ್ಪೆ ಜಿಗಿತ, ಆನೆಬಲ ಹಿಡಿಯುವಾಟ, ನಿಧಾನಗತಿ ಸೈಕಲ್ ಹೀಗೆ ಸಾಕಷ್ಟು ಗ್ರಾಮೀಣ ಕ್ರೀಡೆಗಳು ಗಮನ ಸೆಳೆದವು.
ಗಿಳಿಯಾರು ಯುವಕ ಮಂಡಲ ಗಿಳಿಯಾರು. ಇದರ ಆಶ್ರಯದಲ್ಲಿ ಹಳೆ ಆಟ ಹೊಸ ಚಿಗುರು-2023 ಹ್ವಾಯ್ ಬನಿಯೇ ಒಂದ್ ಗಳ್ಗಿ ಗಮ್ಮತ್ ಮಾಡ್ವ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ನಿವೃತ್ತ ಅಧ್ಯಾಪಕ ಭೋಜು ಶೆಟ್ಟಿ ಉದ್ಘಾಟಿಸಿದರು. ಗಿಳಿಯಾರು ಯುವಕ ಮಂಡಲ ಗಿಳಿಯಾರು ಅಧ್ಯಕ್ಷ ಶೇಖರ್ ಜಿ, ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ, ಇದ್ದರು.














Leave a Reply