
ಕೋಟ: ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ವತಿಯಿಂದ ಮದರ್ ಥೆರೆಸಾ ಜನ್ಮ ದಿನಾಚರಣೆಯನ್ನು ಮಧುವನ ವಿವೇಕಾನಂದ ಪ್ರೌಢ ಶಾಲೆಯ ಸಭಾಂಗಣದಲ್ಲಿ ಆಚರಿಸಲಾಯಿತು.
ಲಯನ್ಸ್ ಕ್ಲಬ್ ನ ಚಾರ್ಟರ್ ಕಾರ್ಯದರ್ಶಿ ಹಾಗೂ ನಿ. ಪ್ರೋಫೆಸರ್ ಕಲ್ಕಟ್ಟೆ ಚಂದ್ರಶೇಖರ್ ಶೆಟ್ಟಿ ಮದರ್ ಥೆರೆಸಾ ರವರ ಜೀವನ ಚರಿತ್ರೆಯ ಬಗ್ಗೆ ಮಾತನಾಡಿದರು.
ಲಯನ್ಸ್ ಕ್ಲಬ್ನ ಕೋಶಾಧಿಕಾರಿ ವಸಂತ್ ವಿ ಶೆಟ್ಟಿ ಅಚ್ಲಾಡಿ, ನಿಕಟ ಪೂರ್ವ ಅಧ್ಯಕ್ಷ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ, ಮಾಜಿ ಅಧ್ಯಕ್ಷರಾದ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಅಶ್ವಥ್ ಶೆಟ್ಟಿ ಅಚ್ಲಾಡಿ, ಶರತ್ ಶೆಟ್ಟಿ ಕೊಮೆ ಅಚ್ಲಾಡಿ, ಚಂದ್ರ ಶೆಟ್ಟಿ ಯಾಳಹಕ್ಲು, ರಂಜಿತ್ ಶೆಟ್ಟಿ ಮಧುವನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷರಾದ ಬನ್ನಾಡಿ ಸೋಮನಾಥ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಮಹೇಂದ್ರ ಆಚಾರ್ ವಂದಿಸಿದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ವತಿಯಿಂದ ಮದರ್ ಥೆರೆಸಾ ಜನ್ಮ ದಿನಾಚರಣೆಯನ್ನು ಮಧುವನ ವಿವೇಕಾನಂದ ಪ್ರೌಢ ಶಾಲೆಯ ಸಭಾಂಗಣದಲ್ಲಿ ಆಚರಿಸಲಾಯಿತು.














Leave a Reply