Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ -ಹೈನುಗಳಿಗೆ ಬಂಜೆತನ ನಿವರಣಾ ಶಿಬಿರ ಆಯೋಜನೆ

ಪಾಂಡೇಶ್ವರ -ಹೈನುಗಳಿಗೆ ಬಂಜೆತನ ನಿವರಣಾ ಶಿಬಿರ ಆಯೋಜನೆ

ಕೋಟ: ಸಹಕಾರಿ ಹಾಲು ಉತ್ಪಾದಕರ ಮಹಿಳಾ ಸಂಘ ಪಾಂಡೇಶ್ವರ ಇಲ್ಲಿ ಹೈನುಗಳಿಗೆ ಬಂಜೆತನ ನಿವಾರಣಾ ಶಿಬಿರ ಪಾಂಡೇಶ್ವರ ಪರಿಸರದ ವಿವಿಧ ಭಾಗಗಳಲ್ಲಿ ಗುರುವಾರ ಏರ್ಪಡಿಸಲಾಯಿತು.

ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವೈದ್ಯರಾದ ಡಾ.ನಿಜಾಮ್ ಪಟೇಲ್ ಪ್ರಸ್ತುತ ಹೈನುಗಳಿಗೆ ಬಂಜೆತನದ ಕುರಿತು ಸಮಗ್ರ ಮಾಹಿತಿ ನೀಡಿದರಲ್ಲದೆ ಅಗತ್ಯ ರಾಸುಗಳಿಗೆ ಸೂಕ್ತ ಲಸಿಕೆ ನೀಡಿ ಅನುಸರಿಸುವ ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಶಾಂತಾ ಭಟ್ ,ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ಯಾಮಲ,ಸಹಾಯಕಿ ಸುಜಾತ ಮತ್ತಿತರರು ಉಪಸ್ಥಿತರಿದ್ದರು.

ಸಹಕಾರಿ ಹಾಲು ಉತ್ಪಾದಕರ ಮಹಿಳಾ ಸಂಘ ಪಾಂಡೇಶ್ವರ ಇಲ್ಲಿ ಹೈನುಗಳಿಗೆ ಬಂಜೆತನ ನಿವಾರಣಾ ಶಿಬಿರ ಪಾಂಡೇಶ್ವರ ಪರಿಸರದ ವಿವಿಧ ಭಾಗಗಳಲ್ಲಿ ಗುರುವಾರ ಏರ್ಪಡಿಸಲಾಯಿತು.

Leave a Reply

Your email address will not be published. Required fields are marked *