Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ- ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಬ್ರಹ್ಮಶ್ರೀ ನಾರಾಯಣಗುರು 169ನೇ ಜಯಂತೋತ್ಸವ

ಕೋಟ: ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಮೂಡಹಡು ಇವರ ಆಶ್ರಯದಲ್ಲಿ ಬ್ರಯ್ಮಶ್ರೀ ನಾರಾಯಣಗುರುಗಳ 169ನೇ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಪ್ರಯುಕ್ತ ಗುರು ಪೂಜೆ ಇತ್ತೀಚಿಗೆ ಪಾಂಡೇಶ್ವರದ ಬಾಬು ಪೂಜಾರಿಯವರ ಮನೆಯಲ್ಲಿ ಜರಗಿತು. ಮಹಿಳಾ ಮಂಡಲ ಸಾಸ್ತಾನ ಪಾಂಡೇಶ್ವರ ಇವರಿಂದ ಭಜನೆ ಕಾರ್ಯಕ್ರಮ ಜರುಗಿತು.

ಧಾರ್ಮಿಕ ಪೂಜಾ ಕೈಂಕರ್ಯವನ್ನು ಚಂದ್ರಮೋಹನ್ ಪೂಜಾರಿ ನಡೆಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ ವಹಿಸಿದ್ದರು. ಈ ವೇಳೆ ಮುಂದಿನ ವರ್ಷದ ಗುರು ಪೂಜೆಯ ಕಾರ್ಯಕ್ರಮದ ವೀಳ್ಯವನ್ನು ಪಾಂಡೇಶ್ವರ ಗುರಿಕಾರರಾದ ದೂಮ ಪೂಜಾರಿ ಮೂಡಹಡು ಗ್ರಾಮದ ಮೂಡಕಟ್ಟು ಕುಟುಂಬದ ಪ್ರಮುಖರಾದ ಶೇಖರ್ ಪೂಜಾರಿ ಮತ್ತು ಸಹೋದರರು ಸ್ವೀಕರಸಿದರು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೆರಿತು.

ಕಾರ್ಯಕ್ರಮದಲ್ಲಿ ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಇದರ ಅಧ್ಯಕ್ಷ ಎಂ.ಸಿ ಚಂದ್ರಶೇಖರ್, ಪ್ರದಾನ ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ, ನಾರಾಯಣಗುರು ಬಿಲ್ಲವ ಸೇವಾ ಸಂಘ ಬಾಳಕುದ್ರು ಅಧ್ಯಕ್ಷ ವಿಜಯ್ ಪೂಜಾರಿ, ಬಿಲ್ಲವ ಯುವ ವೇದಿಕೆಯ ಸದಸ್ಯರು,ಗ್ರಾಮಸ್ಥರು ಭಾಗವಹಿಸಿದ್ದರು.

ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಮೂಡಹಡು ಇವರ ಆಶ್ರಯದಲ್ಲಿ ಬ್ರಯ್ಮಶ್ರೀ ನಾರಾಯಣಗುರುಗಳ 169ನೇ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಪ್ರಯುಕ್ತ ಗುರು ಪೂಜೆ ಇತ್ತೀಚಿಗೆ ಪಾಂಡೇಶ್ವರದ ಬಾಬು ಪೂಜಾರಿಯವರ ಮನೆಯಲ್ಲಿ ಜರಗಿತು.

Leave a Reply

Your email address will not be published. Required fields are marked *