
ಕೋಟ: ಮೂಡುಗಿಳಿಯಾರು ಸ.ಸಂಯುಕ್ತ ಪ್ರೌಢಶಾಲೆಯಲ್ಲಿ ಕಾರ್ಕಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೆ.1ರಂದು ಜರಗಿತು. ಕೋಟ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳ ವ್ಯಕ್ತಿತ್ವ ವಿಕಸನ, ಪ್ರತಿಭಾ ಅನಾವರಣಕ್ಕೆ ಸಹಕಾರಿಯಾಗುತ್ತದೆ ಎಂದರು.
ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ವೆಂಕಟೆಶ್ ಅಡಿಗ, ಯೋಗೀಂದ್ರ ಪೂಜಾರಿ ಶುಭ ಹಾರೈಸಿದರು. ಗ್ರಾ.ಪಂ. ಸದಸ್ಯ ಶೇಖರ್ ಜಿ., ಸುಚಿತ್ರಾ, ಇಲಾಖೆಯ ಪ್ರತಿನಿಧಿಗಳಾದ ಸುರೇಶ್ ಕುಂದರ್, ಸವಿತಾ, ಗಿಳಿಯಾರು ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಿಳಿಯಾರು, ಮುಖ್ಯ ಶಿಕ್ಷಕರಾದ ಶಿವರಾಮ್ ಭಟ್, ರಮೇಶ್ ಉಪಸ್ಥಿತರಿದ್ದರು.
ಈ ಸಂದರ್ಭ ಕಾರ್ಕಡ ಕ್ಲಸ್ಟರ್‍ನ 12 ಪ್ರಾಥಮಿಕ, 5 ಪ್ರೌಢಶಾಲೆ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಜರಗಿತು.
ಶಿವರಾಮ್ ಭಟ್ ಸ್ವಾಗತಿಸಿ, ದೈ.ಶಿ.ಶಿಕ್ಷಕ ಶೇಖರ್ ಕಾರ್ಯಕ್ರಮ ನಿರೂಪಿಸಿ, ರಮೇಶ್ ವಂದಿಸಿದರು.
ಮೂಡುಗಿಳಿಯಾರು ಸ.ಸಂಯುಕ್ತ ಪ್ರೌಢಶಾಲೆಯಲ್ಲಿ ಕಾರ್ಕಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಕ್ಕೆ ಕೋಟ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ವೆಂಕಟೆಶ್ ಅಡಿಗ, ಯೋಗೀಂದ್ರ ಪೂಜಾರಿ, ಮುಖ್ಯ ಶಿಕ್ಷಕರಾದ ಶಿವರಾಮ್ ಭಟ್, ರಮೇಶ್ ಉಪಸ್ಥಿತರಿದ್ದರು.
Leave a Reply