
ಕೋಟ: ಕರ್ನಾಟಕದ ಕರಾವಳಿಯಲ್ಲಿ ಹುಟ್ಟಿದ ಯಕ್ಷಗಾನ ಕಲೆ ದೇಶ ವಿದೇಶಗಳಲ್ಲೂ ತನ್ನ ವೈಶಿಷ್ಟ್ಯತೆಯಿಂದ ಮೆರೆದಿದೆ. ತುತ್ತು ಅನ್ನಕ್ಕೂ ಗತಿ ಇಲ್ಲದ ಎಳೆವೆಯಲ್ಲಿ ಯಕ್ಷಗಾನಕ್ಕೆ ನನ್ನಂತೆ ಅನೇಕರು ಕಾಲಿಟ್ಟಿದ್ದಾರೆ. ಅದರಿಂದಲೇ ಪ್ರಸಿದ್ಧಿಯನ್ನು ಹೊಂದಿದ್ದಾರೆ. ಬದುಕಿಗಾಗಿ ರಂಗದಲ್ಲಿಯೇ ಯಕ್ಷ ಶಿಕ್ಷಣ ಪಡೆದು, ಅದರಿಂದ ಬಂದ ಮೊತ್ತ ಜೀವನಕ್ಕೆ ಆ ಕಾಲದಲ್ಲಿ ಸಾಕಾಗದೇ ಇದ್ದರೂ, ಅಂದಿನ ಶ್ರಮ ಇಂದು ಪ್ರತಿಫಲ ನೀಡಿದೆ. ಯಾಕೆಂದರೆ ದೇಶದಾದ್ಯಂತ ನಾವು ಯಕ್ಷಗಾನ ಕಲೆಯಿಂದ ಗುರುತಿಸಿಕೊಂಡಿದ್ದೇವೆ. ಯಕ್ಷಗಾನ ಕಲೆ ಪ್ರಾಥಮಿಕ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಬೇಕೇ ಬೇಕು.
ಯಕ್ಷಗಾನ ಜೀವನದಲ್ಲಿ ಪುರಾಣ ಕಥೆಗಳನ್ನು ಅರಿಯುವುದಕ್ಕಾಗಿ ಬೇಕು. ಜೀವನ ಪಕ್ವತೆಯನ್ನು ಹೊಂದುವುದಕ್ಕೆ ಈ ಕಲೆ ಅಗತ್ಯ ಬೇಕು. ಕಲಿಕೆಗೆ ಪ್ರಾತಿನಿಧ್ಯ ಕೊಡುವ ಸಂಸ್ಥೆ ಯಶಸ್ವೀ ಕಲಾವೃಂದದಲ್ಲಿ ಸಮರ್ಥ ಗುರುಗಳಿದ್ದು ಕಲಿಕೆಗಾಗಿ ಶ್ರಮಿಸುವ ಕಾರ್ಯವನ್ನು ಸರ್ವರೂ ಶ್ಲಾಘಿಸಲೇ ಬೇಕು ಎಂದು ಪ್ರಸಿದ್ಧ ಯಕ್ಷಗಾನ ಕಲಾವಿದ ಕೋಟ ಸುರೇಶ ಬಂಗೇರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಮೆ, ತೆಕ್ಕಟ್ಟೆಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇವರು ಪ್ರಸ್ತುತಿ ಪಡಿಸುವ ‘ಯಕ್ಷಗಾನ ಪೂರ್ವರಂಗ ಪ್ರಾಥ್ಯಕ್ಷಿಕೆ’ಯನ್ನು ಸೆ. 2ರಂದು ಪ್ರಸಿದ್ಧ ಯಕ್ಷಗಾನ ಕಲಾವಿದ ಕೋಟ ಸುರೇಶ ಬಂಗೇರ ದೀವಟಿಕೆಗೆ ತೈಲವನ್ನು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗೌರವ ಅಭ್ಯಾಗತರಾಗಿ ಆಗಮಿಸಿದ ಕೊಮೆ ಕೊರವಡಿ ವಿವಿದೋದ್ಧೇಶ ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ಮಾತನ್ನಾಡಿ, ಕೊಮೆ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ಈ ಸಂಸ್ಥೆ ಹಲವಾರು ಸಾಂಸ್ಕøತಿಕ ಚಟುವಟಿಕೆಗಳಿಂದ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸುವ ಮೂಲಕ ಶಾಲಾ ಮಕ್ಕಳು ಪ್ರೇರಣೆಗೊಳಗಾಗಿ ಈ ಕಲೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಆಗಲೇ ಇವರ ಶ್ರಮಕ್ಕೆ ಫಲ ದೊರಕಿದಂತಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸರಿತಾ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜು ಪೂಜಾರಿ, ಯಶಸ್ವೀ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಶಾಲ ಮುಖ್ಯೋಪಾಧ್ಯಾಯಿನಿ ಸೌಪರ್ಣಿಕ ಸ್ವಾಗತಿಸಿದರು. ಅಧ್ಯಾಪಕಿ ಸುನೀತಾ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಶಸ್ವೀ ಕಲಾವೃಂದದ ಚಿಣ್ಣರ ಬಳಗ “ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ” ರಂಗದಲ್ಲಿ ಪ್ರದರ್ಶಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಮೆ, ತೆಕ್ಕಟ್ಟೆಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇವರು ಪ್ರಸ್ತುತಿ ಪಡಿಸುವ ‘ಯಕ್ಷಗಾನ ಪೂರ್ವರಂಗ ಪ್ರಾಥ್ಯಕ್ಷಿಕೆ’ಯನ್ನು ಸೆ. 2ರಂದು ಪ್ರಸಿದ್ಧ ಯಕ್ಷಗಾನ ಕಲಾವಿದ ಕೋಟ ಸುರೇಶ ಬಂಗೇರ ದೀವಟಿಕೆಗೆ ತೈಲವನ್ನು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
Leave a Reply