Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರೋಟರಿ ಮಣಿಪಾಲ ಹಿಲ್ಸ್ ನ ಮುದ್ದುಕೃಷ್ಣ ಸ್ಪರ್ಧೆ

ರೋಟರಿ ಮಣಿಪಾಲ ಹಿಲ್ಸ್ ನ ಪ್ರಾಯೋಜಕತ್ವದಲ್ಲಿರುವ ರಾಜೀವನಗರ, ನೇತಾಜಿನಗರ, ಪ್ರಗತಿನಗರ, ಆದರ್ಶನಗರ, ಮಂಚಿಕೋಡಿ, ಮೂಡುಅಲೆವೂರು ರೋಟರಿ ಸಮುದಾಯ ದಳಗಳ ವ್ಯಾಪ್ತಿಯಲ್ಲಿಯ ಗ್ರಾಮೀಣ ಮಕ್ಕಳಿಗಾಗಿ ಏರ್ಪಡಿಸಲಾದ ಮುದ್ದುಕೃಷ್ಣ ಸ್ಪರ್ಧೆಯು ತಾ.04.09.2023 ಸೋಮವಾರದಂದು ಮಣ್ಣಪಳ್ಳದಲ್ಲಿರುವ ರೋಟರಿ ಹಾಲಿನಲ್ಲಿ ಅಪರಾಹ್ನ ಜರುಗಿತು.

ಸ್ಪರ್ಧೆಯ ಪ್ರಾರಂಭದಲ್ಲಿ ರೋಟರಿ ಅಧ್ಯಕ್ಷ ರೊ ರಮಾನಂದ ಭಟ್ ಸ್ವಾಗತಿಸಿ ರೋಟರಿ ಜಿಲ್ಲಾ ಉಪರಾಜ್ಯಪಾಲ ರೊ ಡಾ ಕೆಂಪರಾಜ್ ರವರು ಸ್ಪರ್ಧೆಯನ್ನು ವಿದ್ಯುಕ್ತವಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯ‌ಸೇನಾನಿ ರೊ ತಾರಾ ಶೆಟ್ಟಿಯವರು ಶುಭ ಹಾರೈಸಿದರು. ಮೂರು ವಯೋಮಿತಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಾರು 67 ಮಕ್ಕಳು ಭಾಗವಹಿಸಿದ್ದು, ವಿಜಯಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಲಯ ತರಬೇತುದಾರರಾದ ರೊ ರಾಮಚಂದ್ರ ಉಪಾದ್ಯರು ವಿತರಿಸಿದರು. ಇನ್ನೋರ್ವ ಅತಿಥಿ ರೊ ಗೋಪಿನಾಥ ರಾವ್ ಸರ್ವಾದೆಯವರು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹಕರ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು. ಕಾರ್ಯದರ್ಶಿ ಉಪ್ಪುಂದ ಮಾಧವ ಮೈಯ್ಯನವರು ವಂದಿಸಿದರು. ಲಘುಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *