ಕೋಟ: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ,ಕೋಟ ಘಟಕ ಮತ್ತು ಮಹಿಳಾ ಸಂಘಟನೆ ಕೋಟ ಘಟಕ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನೆ ಕಾರ್ಯಕ್ರಮ ಮಂಗಳವಾರ ಏರ್ಪಡಿಸಿತು.
ಮೂಡುಗಿಳಿಯಾರು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ನಾಗು ಜಿ ಕೋಟ್ಯಾನ್ ಇವರನ್ನು ಅವರ ಸ್ವಗೃಹದಲ್ಲಿ ಅವರ ಮನೆಯವರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಗೌರವಿಸಿ ಅಭಿನಂದಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಹಿರಿಯಡ್ಕ,ನಿಕಟಪೂರ್ವ ಜಿಲ್ಲಾಧ್ಯಕ್ಷ ಶಿವಾರಾಮ ಕೆ.ಎಮ್ ಕೋಟ,ಜಿಲ್ಲಾ ಉಪಾಧ್ಯಾಕ್ಷರಾದ ಜಯಂತ್ ಪುತ್ರನ್ ಕೋಡಿ, ಗುಲಾಬಿ ದೇವಾದಾಸ ಬಂಗೇರ, ಕೋಟ ಘಟಕದ ಅಧ್ಯಕ್ಷ ರಂಜಿತ್ ಕುಮಾರ್ ಬಾರಿಕೆರೆ, ಉಪಾಧ್ಯಕ್ಷ ಮಹೇಶ್ ಕಂಬಳಗದ್ದೆ, ಗೌರವ ಸಲಹೆಗಾರರಾದ ನಾಗೇಶ್ ಮೆಂಡನ್ ಪಡುಕರೆ, ಅಶೋಕ್ ವಿ ಕುಂದರ್. ಪದಾಧಿಕಾರಿಗಳಾದ ಸುಹಾಸಿನಿ ಪಡುಕರೆ,
ಅಭಿಜಿತ್ ಕಾಂಚನ್ ಬಾರಿಕೆರೆ,ಸಂತೋಷ ಮಣೂರು, ಉಪಸ್ಥಿತರಿದ್ದರು. ಕೋಟ ಫಟಕದ ಕಾರ್ಯದರ್ಶಿ ಪ್ರವೀಣ್ ಕುಂದರ್ ಪಡುಕರೆ ಕಾರ್ಯಕ್ರಮ ನಿರೂಪಣೆಗೈದರು.
ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ,ಕೋಟ ಘಟಕ ಮತ್ತು ಮಹಿಳಾ ಸಂಘಟನೆ ಕೋಟ ಘಟಕ
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ,ಉಡುಪಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಮೂಡುಗಿಳಿಯಾರು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ನಾಗು ಜಿ ಕೋಟ್ಯಾನ್ ಇವರನ್ನು ಅವರ ಸ್ವಗೃಹದಲ್ಲಿ ಗುರುವಂದನೆ ಸಲ್ಲಿಸಲಾಯಿತು.














Leave a Reply