ಕೋಟ: ಕೂಟಮಹಾಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆಯವರಿಂದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವರಿಗೆ ಲೋಕ ಕಲ್ಯಾಣಾರ್ಥವಾಗಿ ಹಾಗೂ ಮಳೆ ಬೆಳೆ ಸಮೃದ್ಧಿಗಾಗಿ ಪ್ರಾರ್ಥಿಸಿ ಲಕ್ಷ ತುಳಸಿ ಅರ್ಚನೆ ನಡೆಯಿತು.
ದೇವಸ್ಥಾನದ ಆಡಳಿತದ ಮಂಡಳಿ ಅಧ್ಯಕ್ಷ ಕೆ .ಎಸ್. ಕಾರಂತ ಹಾಗೂ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ, ವೇದಮೂರ್ತಿ ಜನಾರ್ದನ ಅಡಿಗರನ್ನೊಡಗೂಡಿ ಶ್ರೀ ದೇವರ ಸಮ್ಮುಖದಲ್ಲಿ ವೇದಘೋಷದೊಂದಿಗೆ ಪ್ರಾರ್ಥಿಸಿದರು.
ಈ ಸಂಧರ್ಭದಲ್ಲಿ ದೇವಸ್ಥಾನದ ಮಾಜಿ ಅಧ್ಯಕ್ಷ ಜಗದೀಶ ಕಾರಂತ, ಅಂಗಸಂಸ್ಥೆ ಕಾರ್ಯದರ್ಶಿ ಮಹಾಬಲ ಹೇರ್ಳೆ, ತಾರಾನಾಥ ಹೊಳ್ಳ, ಮಂಜುನಾಥ ಉಪಾಧ್ಯ, ಕೋಶಾಧಿಕಾರಿ ಅಮರಹಂದೆ, ಮತ್ತು ಸೂರ್ಯನಾರಾಯಣ ಹೊಳ್ಳ ಉಪಸ್ಥಿತರಿದ್ದರು.
ನಿಗಮಾಗಮ ಪಾಠಶಾಲೆಯ ವಿಧ್ಯಾರ್ಥಿಗಳಿಂದ ಶ್ರೀ ವಿಷ್ಣು ಸಹಸ್ರನಾಮಾವಳಿ ಹಾಗೂ ಶ್ರೀ ವಿಷ್ಣು ಅಷ್ಟೋತ್ತರ ಸಹಸ್ರನಾಮದ ಪಠಣದೊಂದಿಗೆ ತುಳಸಿ ಅರ್ಚನೆ ಸಂಪನ್ನಗೊಂಡಿತು.
ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯವರಿಂದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವರಿಗೆ ಲೋಕ ಕಲ್ಯಾಣಾರ್ಥವಾಗಿ ಹಾಗೂ ಮಳೆ ಬೆಳೆ ಸಮೃದ್ಧಿಗಾಗಿ ಪ್ರಾರ್ಥಿಸಿ ಲಕ್ಷ ತುಳಸಿ ಅರ್ಚನೆ ನಡೆಯಿತು.














Leave a Reply