Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ವತಿಯಿಂದ ಬನ್ನಾಡಿ ಶಾಲೆಯ ಹಿರಿಯ ನಿವೃತ್ತ ಶಿಕ್ಷಕ ನಾಗಪ್ಪಯ್ಯ ಹಂದೆಗೆ ಸನ್ಮಾನ

ಕೋಟ: ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ವತಿಯಿಂದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಂಡಿತು. ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪರಮ ಹಂಸ ಪ್ರೌಢ ಪ್ರಾಥಮಿಕ ಶಾಲೆ, ಬನ್ನಾಡಿ ಇಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ, 91 ವರ್ಷ ಪ್ರಾಯದ ಹಿರಿಯರಾದ ಹಂದೇರ್ ಮಾಸ್ಟ್ರು ಎಂದೇ ಖ್ಯಾತರಾದ ನಾಗಪ್ಪಯ್ಯ ಹಂದೆ ಯವರನ್ನು ಗೌರವಿಸವ ಮೂಲಕ ಆಚರಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಂದೆ ಮೆಸ್ಟ್ರು ತನ್ನ ಶಿಷ್ಯರೊಂದಿಗೆ ಹಾಗೂ ಇತರ ಲಯನ್ಸ್ ಸದಸ್ಯರೊಂದಿಗೆ ಅಂದಿನ ದಿನಗಳನ್ನು ಮೆಲಕು ಹಾಕಿ ಎಲ್ಲರಿಗೂ ಶುಭ ಹಾರೈಸಿದರು.

ಲಯನ್ಸ್ ಕ್ಲಬ್‍ನ ಮಾಜಿ ಕಾರ್ಯದರ್ಶಿ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ , ಲಯನ್ಸ್ ಕ್ಲಬ್‍ನ ಕೋಶಾಧಿಕಾರಿ ಲಯನ್ ವಸಂತ್ ವಿ ಶೆಟ್ಟಿ ಅಚ್ಲಾಡಿ, ಪ್ರಥಮ ಉಪಾಧ್ಯಕ್ಷರಾದ ಬಿ.ಬಿ.ಪ್ರವೀಣ್ ಹೆಗ್ಡೆ, ಹಿರಿಯ ಲಯನ್ ಸದಸ್ಯರಾದ ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ ಕೆ,ಬನ್ನಾಡಿ ಪ್ರಭಾಕರ್ ಶೆಟ್ಟಿ, ಚಾರ್ಟರ್ ಕೋಶಾಧಿಕಾರಿ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ, ಮಾಜಿ ಕೋಶಾಧಿಕಾರಿ ಉಪ್ಲಾಡಿ ಶ್ರೀಧರ್ ಆರ್ ಶೆಟ್ಟಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಮಹೇಂದ್ರ ಆಚಾರ್ ಮಧುವನ ವಂದಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಶಿಕ್ಷಕರ ದಿನಾಚರಣೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷರಾದ ಬನ್ನಾಡಿ ಸೋಮನಾಥ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರ ದಿನಾಚರಣೆ ಪ್ರಯುಕ್ತ ಬನ್ನಾಡಿ ಶಾಲೆಯ ಹಿರಿಯ ನಿವೃತ್ತ ಶಿಕ್ಷಕರಾದ ನಾಗಪ್ಪಯ್ಯ ಹಂದೆ” (ಹಂದೇರ್ ಮಾಸ್ಟ್ರ) ರವರನ್ನು ಗೌರವಿಸಲಾಯಿತು.
ಕೋಟ.ಸೆ.6 ಬನ್ನಾಡಿ

Leave a Reply

Your email address will not be published. Required fields are marked *