Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನ: ಸೆ.9 ರಂದು ಸಾಮೂಹಿಕ ಶನಿಶಾಂತಿ ಮತ್ತು ಶ್ರೀ ಶನಿಕಥಾ ಪಾರಾಯಣ ನಡೆಯಲಿದೆ.

ಕೋಟ ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನ:ಸೆ.9 ರಂದು ಸಾಮೂಹಿಕ ಶನಿಶಾಂತಿ ಮತ್ತು ಶ್ರೀ ಶನಿಕಥಾ ಪಾರಾಯಣ ನಡೆಯಲಿದೆ.

ಕೋಟ: ಉಡುಪಿ ಜಿಲ್ಲೆಯ ಕೋಟದ ಹಾಡಿಕೆರೆ ಬೆಟ್ಟುವಿನಲ್ಲಿ ಪ್ರತಿಷ್ಠಾಪನೆಗೊಂಡ ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಕೊನೆಯ ಶನಿವಾರ ಸೆ. 9 ರಂದು ಬೆಳಿಗ್ಗೆ 9 ಗಂಟೆಗೆ ಸಾಮೂಹಿಕ ಶನಿಶಾಂತಿ, ವಿಶೇಷ ಹೂವಿನ ಅಲಂಕಾರ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

2 ಗಂಟೆಗೆ ಶ್ರೀ ಕ್ಷೇತ್ರದ ಪಾತ್ರಿಗಳಾದ ಭಾಸ್ಕರ್ ಸ್ವಾಮಿ ಅವರ ನೇತೃತ್ವದಲ್ಲಿ ಶನೀಶ್ವರ ಸ್ವಾಮಿಯ ದರ್ಶನ ಸೇವೆ ಜರುಗಲಿರುವುದು. ಸಂಜೆ 4 ಗಂಟೆಗೆ “ರಾಜಾ ವಿಕ್ರಮಾದಿತ್ಯ ಚರಿತ್ರೆ” ಎಂಬ ಶ್ರೀ ಶನಿಕಥಾ ಪಾರಾಯಣ ನಡೆಯಲಿರುವುದು‌. ಹಾಗೂ ರಾತ್ರಿ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿರುವುದು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ವೇ.ಮೂ. ಜನಾರ್ದನ ಅಡಿಗ ಸಾಲಿಗ್ರಾಮ ಅವರ ನೇತೃತ್ವದಲ್ಲಿ ಜರುಗಲಿದೆ ಎಂದು ದೇವಳದ ಅರ್ಚಕರಾದ ಜಯರಾಜ್ ಸಾಲಿಯಾನ್ ಪಡುಕರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *