Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಧಾರವಾಡದಲ್ಲಿ ಗಮಕ ವಾಚನ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಕೋಟ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವ ವಿದ್ಯಾ ನಿಲಯ ಧಾರವಾಡ, ಚೇತನ ಫೌಂಡೇಶನ್ ಹುಬ್ಬಳ್ಳಿ ಇವರ ಸಹಯೋಗದ ಆಯೋಜನೆಯ ‘ಧಾರವಾಡ ನುಡಿ ಸಡಗರ-ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದ ಎರಡನೆಯ ದಿನದ ಗಮಕ ವಾಚನ, ಮುಕ್ತ ಗಜ್‍ಲ್, ಕವಿಗೋಷ್ಠಿ ಅಂಗವಾಗಿ ಗಂಗೊಳ್ಳಿ ಸರಸ್ವತಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆ ಮತ್ತು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ತೃತೀಯ ಬಿ. ಎಸ್ಸಿ. ಪದವೀಧರೆ ಗಮಕಿ ಕುಮಾರಿ ಕಾವ್ಯ ಹಂದೆಯವರಿಂದ ಗಮಕವಾಚನ ವ್ಯಾಖ್ಯಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

ಸೆ. 9ರ ಶನಿವಾರ ಧಾರವಾಡ ಕರ್ನಾಟಕ ವಿಶ್ವ ವಿದ್ಯಾ ನಿಲಯದ ಕನಕ ಪೀಠದ ಕನಕ ಭವನದಲ್ಲಿ ಕುಮಾರಿ ಕಾವ್ಯ ಅವರು ನಾಟಿ, ಹಂಸಧ್ವನಿ, ಹಿಂದೋಳ, ಅಮೀರ್ ಕಲ್ಯಾಣಿ, ಕಲ್ಯಾಣಿ, ಶಿವರಂಜಿನಿ, ಜೋಗ್ ಮೊದಲಾದ ರಾಗಗಳ ಮೂಲಕ ಗಮಕ ವಾಚನದಲ್ಲೂ, ಸುಜಯೀಂದ್ರ ಹಂದೆ ವ್ಯಾಖ್ಯಾನಕಾರರಾಗಿಯೂ ದಾಸ ವರೇಣ್ಯ, ಭಕ್ತಿ ಕಾವ್ಯ ಪರಂಪರೆಯ ಕನಕದಾಸರ ನಳಚರಿತ್ರೆಯ ಆರನೇಯ ಸಂಧಿಯ ಕಾರ್ಕೋಟಕ ದಂಶನ ಪ್ರಸಂಗವನ್ನು ಕನಕ ಪೀಠದ ವಿದ್ಯಾರ್ಥಿ ಮತ್ತು ಕನ್ನಡ ಮನಸ್ಸುಗಳಿಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು.

ಗೋಷ್ಠಿಯಲ್ಲಿ ಧಾರವಾಡದ ಖ್ಯಾತ ಗಜಲ್ ಕವಿ ಪೀರಸಾಬ ನದಾಫ್, ಕವಿಗಳಾದ ಶೇಖರ್ ಹಾದಿಮನಿ, ಪುಂಡಲೀಕ ನಾಯಕ್, ಧಾರವಾಡ ನುಡಿ ಸಡಗರ ಸಂಯೋಜಕ ಚಂದ್ರಶೇಖರ್ ಮಾಡಲಗೇರಿ ಉಪಸ್ಥಿತರಿದ್ದರು.

ಗಮಕ ವಾಚನ, ಮುಕ್ತ ಗಜ್‍ಲ್, ಕವಿಗೋಷ್ಠಿ ಅಂಗವಾಗಿ ಗಂಗೊಳ್ಳಿ ಸರಸ್ವತಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆ ಮತ್ತು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ತೃತೀಯ ಬಿ. ಎಸ್ಸಿ. ಪದವೀಧರೆ ಗಮಕಿ ಕುಮಾರಿ ಕಾವ್ಯ ಹಂದೆಯವರಿಂದ ಗಮಕವಾಚನ ವ್ಯಾಖ್ಯಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *