ಕೋಟ: ಕೋಟದ ಸೇವಾಸಂಗಮ ಶಿಶುಮಂದಿರದ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೋಟ ಅಮೃತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಪುಟಾಣಿಗಳ ಸಾಂಸ್ಕೃತಿಕ ಕಲವರ ಕಾರ್ಯಕ್ರಮ ಏರ್ಪಡಿಸಿತು.
ಕಾರ್ಯಕ್ರನವನ್ನು ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಉದ್ಘಾಟಿಸಿ ಶುಭಹಾರೈಸಿದರು.
ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ ದಿಕ್ಸೂಚಿ ಭಾಷಣಗೈದು ಪೋಷಕರು ವಿದ್ಯಾರ್ಥಿಗಳನ್ನು ಸುಸಂಸ್ಕೃತರನ್ನಾಗಿಸುವ ಸಾಕಷ್ಟು ವಿಚಾರಗಳ ಬಗ್ಗೆ ಉಲ್ಲೇಖಿಸಿದರು. ಆಧುನಿಕತೆಯ ಕಾಲಘಟ್ಟದಲ್ಲಿ ನಾವುಗಳು ಇದ್ದೇವೆ ನಮ್ಮ ಸಂಸ್ಕಾರ ಸಂಸ್ಕ್ರತಿಗಳನ್ನು ಬದಿಗಿರಿಸುತ್ತಿದ್ದೇವೆ ಇದು ನಮ್ಮ ಅದಪತನಕ್ಕೆ ಸಾಕ್ಷಿಯಾಗುತ್ತಿದೆ ಇದಕ್ಕೆ ಅವಕಾಶ ನೀಡದೆ ಮನೆಯಲ್ಲೆ ಮಕ್ಕಳಿಗೆ ಹಿಂದಿನ ತಲೆಮಾರಿನಿಂದ ಬಳುವಳಿಯಾಗಿ ಬಂದ ವಿಚಾರಗಳನ್ನು ನೀಡಿ ಅಲ್ಲದೆ
ಸಂಸ್ಕಾರ ಭರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಕರೆ ಇತ್ತರು.

ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತ ಋಶಿರಾಜ್ ಸಾಸ್ತಾನ ಆಂಗ್ಲಮಾಧ್ಯಮದ ವ್ಯಾಮೂಹ ಬಿಟ್ಟು ಸಂಸ್ಕಾರ ನೀಡುವ ಅಥವಾ ಕನ್ನಡ ಮಾಧ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಶಿಕ್ಷಣವನ್ನು ನೀಡಿ ಎಂದರಲ್ಲದೆ ಆ ಮೂಲಕ ನಮ್ಮ ಹಿರಿತನದ ಕಾಲಘಟ್ಟದಲ್ಲಿ ನಮ್ನನ್ನು ಕಾಯ್ದು ಕಾಪಾಡುವ ಮನಸ್ಥಿತಿ ಮಕ್ಕಳಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ.ಆಂಗ್ಲ ಶಿಕ್ಷಣ ನೀಡಿ ಪೋಷಕರನ್ನು ದಿಕ್ಕುದಿಸೆಯಲ್ಲದಂದೆ ಅನಾಥಾಶ್ರಮದ ಮೆಟ್ಟಿಲು ನೋಡಲು ಅವಕಾಶ ನೀಡಬೇಡಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಸೇವಾಸಂಗಮ ಶಿಶುಮಂದಿರದ ಕೋಟ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ ವಹಿಸಿದ್ದರು. ಸೇವಾಸಂಗಮ ಶಿಶುಮಂದಿರದ ಉಪಾಧ್ಯಕ್ಷೆ ಗೀತಾ ಎ ಕುಂದರ್, ಸಮಿತಿಯ ಪ್ರಮುಖರಾದ ಸುಶೀಲಸೋಮಶೇಖರ್ ಉಪಸ್ಥಿತರಿದ್ದರು. ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಶುಮಂದಿರದ ಸ್ಥಾನೀಯ ಸಮಿತಿ ಸದಸ್ಯರಾದ ಭಾಗೇಶ್ವರಿ ಮಯ್ಯ ನಿರೂಪಿಸಿದರು.ಸಮಿತಿ ಸದಸ್ಯ ರವೀಂದ್ರ ಕೋಟ ವಂದಿಸಿದರು. ನಂತರ ಪುಟಾಣಿಗಳ ಮುದ್ದುರಾಧೆಕೃಷ್ಣ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಮೆರವಣಿಗೆ ಮೂಲಕ ಆಗಮನ
ಕೋಟದ ಸೇವಾಸಂಗಮ ಶಿಶುಮಂದಿರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಅಮೃತೇಶ್ವರಿ ದೇವಸ್ಥಾನದವರೆಗೆ ಪುಟಾಣಿಗಳು ಮುದ್ದುರಾಧ ಕೃಷ್ಣರ ವೇಷ ಧರಿಸಿ ನೃತ್ಯಗೈಯುತಾ ಸಾಗಿದರು.ಶಿಶು ಮಂದಿರದ ಬಾಲಗೋಕುಲದ ಭಜನಾ ತಂಡದ ನೃತ್ಯ ಭಜನೆ ಕೂಡ ಸಾಗಿ ಬಂತು.
ಕೋಟದ ಸೇವಾಸಂಗಮ ಶಿಶುಮಂದಿರದ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೋಟ ಅಮೃತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಪುಟಾಣಿಗಳ ಸಾಂಸ್ಕೃತಿಕ ಕಲವರ ಕಾರ್ಯಕ್ರಮವನ್ನು ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಉದ್ಘಾಟಿಸಿ ಶುಭಹಾರೈಸಿದರು.














Leave a Reply