ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿ, ಮೋವಾಡಿ, ಸೌಪರ್ಣಿಕ ನದಿಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದ್ದು, ಯಾರು ಇವರಿಗೆ ಕಡಿವಾಣ ಕಾಕುವವರು ಎಂದು ಸಾರ್ವಜನಿಕರೂ ಹಿಡಿಶಾಪ ಹಾಕುತ್ತಿದ್ದರು. ಅದಕ್ಕೆ ಸರಿಯಾಗಿ ಗಂಗೊಳ್ಳಿ ಠಾಣಾಧಿಕಾರಿಯಾಗಿ ಹರೀಶ್ ಆರ್ ನಾಯಕ್ ರವರು ಆಯೋಜನೆಗೊಂಡ ಮೇಲೆ ಅಕ್ರಮ ಮರಳು ಚಟುವಟಿಕೆ ಮಾಡುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ, ಅದರಲ್ಲೂ ಕೆಲವೊಂದು ಸ್ಥಳದಲ್ಲಿ ಕಾಣದ ಪ್ರಭಾವಿ ವ್ಯಕ್ತಿಗಳ ಬೆಂಬಲಿಗರು ತಮ್ಮ ಚಾಳಿಯನ್ನು ಬಿಡದೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದರು. ರಾತ್ರಿಯ ವೇಳೆಯಲ್ಲಿ ಎಡೆಬಿಡದೆ ಮರಳು ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್. ನಾಯಕ್ ರವರು ನಿನ್ನೆ ರಾತ್ರೋರಾತ್ರಿ ಪೊಲೀಸ್ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ 5 ಜನರನ್ನು ವಶಕ್ಕೆ ಪಡೆದಿದ್ದಾರೆ.

ತ್ರಾಸಿ, ಮೋವಾಡಿ, ಸೌಪರ್ಣಿಕ ನದಿಯಲ್ಲಿ ದೋಣಿಯ ಮೂಲಕ ತೆರಳಿ ಅಕ್ರಮ ಮರಳು ದಂಧೆ ಮಾಡುತ್ತಿರುವ ಆಲ್ಟನ್ ತ್ರಾಸಿ ಆನಗೋಡು ಮತ್ತು ಉತ್ತರ ಪ್ರದೇಶ ರಾಜ್ಯದ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು, ಅಕ್ರಮ ದಂದೆಗೆ ಬಳಸಿದ ಎರಡು ದೋಣಿ, ಹಾಗೂ ಅಕ್ರಮ ಮರಳು ದಂಧೆಗೆ ಬಳಸಿದ ಸಲಕರಣೆಗಳನ್ನು ಮುಟ್ಟುಗೋಲು ಹಾಕಿ ಕೇಸು ದಾಖಲಿಸಿ ಹೆಡೆಮುರಿ ಕಟ್ಟಿದ್ದಾರೆ.

ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್ ನಾಯಕ್ ಖಡಕ್ ದಕ್ಷ ಅಧಿಕಾರಿ ಠಾಣೆಗೆ ಬಂದ ಮೇಲೆ ಅಕ್ರಮವಾಗಿ ನಡೆಯುತ್ತಿರುವ ಮಟ್ಕಾ ದಂಧೆ, ಕೋಳಿ ಅಂಕ, ಇಸ್ಪೀಟ್ ಜುಗಾರಿ, ಇತ್ಯಾದಿ ಎಲ್ಲಾ ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕಿದ್ದಾರೆ. ಕಾರ್ಯಚರಣೆ ವೇಳೆ ಜೀಪ್ ಚಾಲಕ ದಿನೇಶ್ ಬೈಂದೂರು, ರಾಘವೇಂದ್ರ ಪಿ, ಯೋಗೀಶ ಪುತ್ರನ್, ಚಂದ್ರ, ಶರಣಪ್ಪ ಹಾಜರಿದ್ದರು.














Leave a Reply