ಕೋಟ: ಯಕ್ಷಗಾನ ಕಲಾಕೇಂದ್ರÀಗಳ ಇತಿಹಾಸದಲ್ಲೇ ಮೊತ್ತಮೊದಲಿಗೆ ಎಂಬಂತೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ,ಐರೋಡಿ ಇವರು ಹಮ್ಮಿಕೊಂಡ ಕಲಾಕೇಂದ್ರದ ಐವತ್ತುವರ್ಷದಲ್ಲಿ ಕಲಿತ ವಿದ್ಯಾರ್ಥಿಗಳ ಸಮಾವೇಶವು ಇತ್ತೀಚೆಗೆ ಕಲಾಕೇಂದ್ರದ ಸದಾನಂದ ರಂಗಮಂಟಪ ಸಾಲಿಗ್ರಾಮದಲ್ಲಿ ನಡೆಯಿತು.
1972ರಲ್ಲಿ ಹಿಮ್ಮೇಳ ಕಲಾವಿದರ ಕೊರತೆಯನ್ನು ಮನಗಂಡು ಐರೋಡಿ ಸದಾನಂದ ಹೆಬ್ಬಾರ ಸ್ಥಾಪಿಸಿದ ನಾರ್ಣಪ್ಪ ಉಪ್ಪೂರರ ಹಿರಿತನದಲ್ಲಿ ಪ್ರಾರಂಭಿಸಲ್ಪಟ್ಟ ಕಲಾಕೇಂದ್ರದಲ್ಲಿ ಸುಮಾರು 3000 ವಿದ್ಯಾರ್ಥಿಗಳು ಯಕ್ಷಗಾನ ಭಾಗವತಿಗೆ, ಮದ್ದಲೆ, ಚಂಡೆ, ಹೆಜ್ಜೆ ಕಲಿತು ಕಲಾವಿದರಾಗಿದ್ದು ಕಲಾಕೇಂದ್ರದ ಐವತ್ತರ ಸಂಭ್ರಮದ ಕಾರ್ಯಕ್ರಮದ ಅಂಗವಾಗಿ ಸಮಾವೇಶ ಏರ್ಪಡಿಸಲಾಗಿತ್ತು.
ಐವತ್ತು ವರ್ಷಗಳ ಹಿಂದೆ ಕಲಾಕೇಂದ್ರವು ಕೋಟದ ಹಿರೇಮಹಾಲಿಂಗೇಶ್ವರ ದೇವಸ್ತಾನದಲ್ಲಿ ಪ್ರಾರಂಭವಾಗಿದ್ದು ಸಮಾವೇಶವನ್ನು ದೇವಸ್ಥಾನದ ಹಿರಿಯ ಅರ್ಚಕರಾದ ಸುಬ್ರಹ್ಮಣ್ಯ ಅಡಿಗರು ಉದ್ಘಾಟಿಸಿದರು. ಅಂದಿನ ಸ್ಥಿತಿ ಗತಿಯನ್ನು ನೆನಪಿಸಿದ ಅಡಿಗರು ಕಲಾಕೇಂದ್ರದ ಶ್ರೇಯಸ್ಸನ್ನು ಹಾರೈಸಿದರು. ಸಭೆಯ ಅದ್ಯಕ್ಷತೆಯನ್ನು ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಸಿ ಕುಂದರ್ ವಹಿಸಿದ್ದರು.ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಪ್ರಾಸ್ತಾವಿಕ ಮಾತನಾಡಿ ಸಮಾವೇಶದ ಉದ್ದೇಶ ವಿವರಿಸಿದರು. ಹಿರಿಯ ಭಾಗವತರಾದ ಸುರೇಶ ಶೆಟ್ಟಿ ವಂದನಾರ್ಪಣೆ ನೀಡಿದರು. ಲಂಬೋದರ ಹೆಗಡೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಸಭಾ ಕಾರ್ಯಕ್ರಮದ ನಂತರ ಎರಡು ದಿನಗಳ ತನಕ ಸಮಾವೇಶ ನಡೆದಿದ್ದು ವಿದ್ಯಾರ್ಥಿಗಳಿಂದಲೇ ಗಾನವೈಭವ, ಯಕ್ಷಗಾನ, ತಾಳಮದ್ದಲೆ ಕಾರ್ಯಕ್ರಮವಿತ್ತು. ಎಪ್ಪತ್ತು –ಎಂಬತ್ತು ವರ್ಷದ ಹಿರಿಯ ವಿದ್ಯಾರ್ಥಿಗಳು ತಮ್ಮ ಸವಿ ನೆನಪುಗಳನ್ನು ಮಾಡಿಕೊಂಡರು.
ಯಕ್ಷಗಾನ ಕಲಾಕೇಂದ್ರÀಗಳ ಇತಿಹಾಸದಲ್ಲೇ ಮೊತ್ತಮೊದಲಿಗೆ ಎಂಬಂತೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ,ಐರೋಡಿ ಇವರು ಹಮ್ಮಿಕೊಂಡ ಕಲಾಕೇಂದ್ರದ ಐವತ್ತುವರ್ಷದಲ್ಲಿ ಕಲಿತ ವಿದ್ಯಾರ್ಥಿಗಳ ಸಮಾವೇಶವು ಇತ್ತೀಚೆಗೆ ಕಲಾಕೇಂದ್ರದ ಸದಾನಂದ ರಂಗಮಂಟಪ ಸಾಲಿಗ್ರಾಮದಲ್ಲಿ ನಡೆಯಿತು.














Leave a Reply