ಕೋಟ: ಪಾಂಡೇಶ್ವರ ವಲಯದ, ಕೋಡಿ ಕಾರ್ಯಕ್ಷೇತ್ರದ ಚೆಕ್ರೇಶ್ವರಿ ಅಮ್ಮನವರು ಮತ್ತು ಪರಿವಾರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1.ಲಕ್ಷ ರೂಪಾಯಿ ಅನುದಾನವನ್ನು ಸಮಿತಿಯ ಅಧ್ಯಕ್ಷ ರಾಮಚಂದ್ರ ಖಾರ್ವಿ ಮತ್ತು ಸಮಿತಿ ಸದಸ್ಯರಿಗೆ ಬ್ರಹ್ಮವರ ತಾಲೂಕಿನ ಯೋಜನಾಧಿಕಾರಿ ರಮೇಶ್ ಪಿ. ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಸುಬ್ರಮಣ್ಯ ಖಾರ್ವಿ , ಸುರೇಶ ಖಾರ್ವಿ, ಆನಂದ್ , ಗೋಪಾಲ ಖಾರ್ವಿ, ಕುಶಾಲ ಖಾರ್ವಿ ಮತ್ತು ಮೇಲ್ವಿಚಾರಕರಾದ ಜಯಲಕ್ಷ್ಮೀ ಸೇವಾಪ್ರತಿನಿಧಿ ಮಾಲತಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಚೆಕ್ರೇಶ್ವರಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1ಲಕ್ಷ ಸಹಾಯನಿಧಿಯನ್ನು ಸಮಿತಿಯ ಅಧ್ಯಕ್ಷ ರಾಮಚಂದ್ರ ಖಾರ್ವಿ ಮತ್ತು ಸಮಿತಿ ಸದಸ್ಯರಿಗೆ ಬ್ರಹ್ಮವರ ತಾಲೂಕಿನ ಯೋಜನಾಧಿಕಾರಿ ರಮೇಶ್ ಪಿ. ಕೆ ಹಸ್ತಾಂತರಿಸಿದರು.














Leave a Reply