Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ

ಕೋಟ: ಬನ್ನಾಡಿ ಗ್ರಾಮದ ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಂಭ್ರಮದಿಂದ ಆಚರಿಸಿ, ಶ್ರೀ ಗೋಪಾಲಕೃಷ್ಣ ದೇವರ ಉತ್ಸವ ಮೂರ್ತಿಯ ಪುರಮೆರವಣಿಗೆಯನ್ನು ನಡೆಸಲಾಯಿತು.

ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿಯ ಪ್ರಯುಕ್ತ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಭಕ್ತಾಧಿಗಳಿಗೆ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳು, ಮೊಸರು ಕುಡಿಕೆ, ಹಗ್ಗಜಗ್ಗಾಟ ಸ್ಪರ್ಧೆ, ಸಂಗೀತ ಕುರ್ಚಿ, ಲಿಂಬು ಚಮಚ ಮತ್ತು ಮುದ್ದುಕೃಷ್ಣ ಸ್ಪರ್ಧೆಯನ್ನು ನಡೆಸಲಾಯಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು.

ಕ್ರೀಡಾ ಕಾರ್ಯಕ್ರಮದ ಅಂಗವಾಗಿ ನಡೆದ ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಉಪ್ಲಾಡಿ ತೆಂಕಬೆಟ್ಟು ದಿಲೀಪ್ ಇವರು ಪುರುಷರÀ ವಿಭಾಗದಲ್ಲಿ ಹಾಗೂ ಉಪ್ಲಾಡಿ ತೆಂಕಬೆಟ್ಟು ಶಾಂತ ಇವರು ಮಹಿಳೆಯರ ವಿಭಾಗದಲ್ಲಿ ವಿಜೇತರಾದರು. ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಉಪ್ಲಾಡಿ ರಾಘವೇಂದ್ರ ಆಚಾರ್ ಇವರ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಉಪ್ಲಾಡಿ ಚೈತ್ರಾ ಇವರ ತಂಡ ಪ್ರಶಸ್ತಿಯನ್ನು ಪಡೆದರು. ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಇಂದಿರಾ ದಯಾಕರ ಪೂಜಾರಿ ಮಹಿಳಾ ವಿಭಾಗದಲ್ಲಿ ಹಾಗೂ ಉಪ್ಲಾಡಿ ಬಡಾಬೆಟ್ಟು ಗಣೇಶ್ ಪೂಜಾರಿ ಇವರ ಮಗಳು ಕುಮಾರಿ ಆರಾಧ್ಯ ಮಕ್ಕಳ ವಿಭಾಗದಲ್ಲಿ ವಿಜೇತರಾದರು. ಲಿಂಬು ಚಮಚ ಸ್ಪರ್ಧೆಯಲ್ಲಿ ಉಪ್ಲಾಡಿ ಬಡಾಬೆಟ್ಟು ಸರಿತಾ ಇವರ ಮಗ ರಿತ್ವಿಕ್ ಆರ್ ವಿಜೇತರಾದರು.

ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಪ್ಲಾಡಿ ಇದರ ಆಶ್ರಯದಲ್ಲಿ ನಡೆದ ಮುದ್ದುಕೃಷ್ಣ ಸ್ಪರ್ಧೆಯ 0-2 ವರ್ಷದ ವಿಭಾಗದಲ್ಲಿ ಕೋಟ ಲತಾ ಜಯಕುಮಾರ್ ದಂಪತಿಗಳ ಪುತ್ರಿ ಕುಮಾರಿ ಲಕ್ಷಾ ಜಿ.ಕೆ ಪ್ರಥಮ ಬಹುಮಾನವನ್ನು, ವಡ್ಡರ್ಸೆ ಕೊತ್ತಾಡಿ ಮೂಡಬೆಟ್ಟು ದೀಪಿಕ ಶಿವಾನಂದ ಶೆಟ್ಟಿ ದಂಪತಿಗಳ ಪುತ್ರಿ ಕುಮಾರಿ ಇಷ್ಟಾ ಶೆಟ್ಟಿ ವಡ್ಡರ್ಸೆ ದ್ವಿತೀಯ ಬಹುಮಾನವನ್ನು ಹಾಗೂ ಉಪ್ಲಾಡಿ ಪೂರ್ಣಿಮಾ ಸತೀಶ್ ಮೊಗವೀರ ದಂಪತಿಗಳ ಪುತ್ರಿ ಕುಮಾರಿ ಇಷಾನಿ ಎಸ್ ಉಪ್ಲಾಡಿ ತೃತೀಯಾ ಬಹುಮಾನವನ್ನು ಪಡೆದರು.

2-4 ವರ್ಷದ ವಿಭಾಗದಲ್ಲಿ ಬ್ರಹ್ಮಾವರ ಕೊಳಂಬೆಯ ದೀಕ್ಷಾ ಸಂತೋಷ್ ದಂಪತಿಗಳ ಪುತ್ರಿ ಕುಮಾರಿ ಸ್ನಿಗ್ಧಾ ಎಸ್ ಆಚಾರ್ ಪ್ರಥಮ ಬಹುಮಾನವನ್ನು, ಕೋಟ ಹಂದಟ್ಟುವಿನ ಅಂಜಲಿ ನವೀನ್ ಕುಮಾರ್ ದಂಪತಿಗಳ ಪುತ್ರ ಆರ್ಯನ್ ಎನ್ ಪೂಜಾರಿ ದ್ವೀತಿಯ ಬಹುಮಾನವನ್ನು ಹಾಗೂ ಉಪ್ಲಾಡಿ ಸೀಮಾ ಕಿರಣ್ ಕುಂದರ್ ದಂಪತಿಗಳ ಪುತ್ರಿ ಕುಮಾರಿ ಸಿಯಾ ತೃತೀಯಾ ಬಹುಮಾನವನ್ನು ಪಡೆದರು.

4-6 ವರ್ಷದ ವಿಭಾಗದಲ್ಲಿ ವಡ್ಡರ್ಸೆಯ ನಾಗರತ್ನ ಉಡುಪ ರಾಘವೇಂದ್ರ ಉಡುಪ ದಂಪತಿಗಳ ಪುತ್ರಿ ಕುಮಾರಿ ಸೌಂದರ್ಯ ಉಡುಪ ಪ್ರಥಮ ಬಹುಮಾನವನ್ನು, ಕೋಟ ಗೊಬ್ಬರಬೆಟ್ಟುವಿನ ಪ್ರತಿಮಾ ನಿತಿನ್ ಕುಮಾರ್ ದಂಪತಿಗಳ ಪುತ್ರಿ ಕುಮಾರಿ ಧನ್ವಿ ದ್ವೀತಿಯ ಬಹುಮಾನವನ್ನು ಹಾಗೂ ಮಧುವನ ಎಮ್.ಜಿ ಕಾಲೋನಿಯ ರೂಪ ರಾಘವೇಂದ್ರ ದಂಪತಿಗಳ ಪುತ್ರ ಅಮೃತ್ ಆರ್ ತೃತೀಯಾ ಬಹುಮಾನವನ್ನು ಪಡೆದರು.

ಗಿಳಿಯಾರು ಸುಬ್ರಾಯ ಮಯ್ಯ, ಯಾಳಕ್ಲು ಚಂದ್ರಶೇಖರ್ ಶೆಟ್ಟಿ ಮತ್ತು ವಡ್ಡರ್ಸೆ ಹಾಡಿಮನೆ ಬಾಲಕೃಷ್ಣ ಶೆಟ್ಟಿ ಇವರು ಮುದ್ದು ಕೃಷ್ಣ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಉಪ್ಲಾಡಿ ಗೋಪಾಲಕೃಷ್ಣ ಭಟ್, ಉಪ್ಲಾಡಿ ಶ್ರೀಧರ್ ಭಟ್, ಉಪ್ಲಾಡಿ ಸುಬ್ರಹ್ಮಣ್ಯ ಭಟ್, ಬನ್ನಾಡಿ ಲೋಕೇಶ್ ಭಟ್ ಮತ್ತು ದಿನೇಶ್ ಐತಾಳ್ ಗುಂಡ್ಮಿ ಇವರು ಶ್ರೀ ಗೋಪಾಲಕೃಷ್ಣ ದೇವರ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯದರ್ಶಿ ಪ್ರಭಾಕರ ಪೂಜಾರಿ, ಕೋಶಾಧಿಕಾರಿ ಉಪ್ಲಾಡಿ ಶ್ರೀಧರ್ ಆರ್ ಶೆಟ್ಟಿ ಹಾಗೂ ಸದಸ್ಯರುಗಳಾದ ಉಪ್ಲಾಡಿ ವೆಂಕಟರಮಣ ಭಟ್, ದಿನೇಶ್ ತೆಂಕಬೆಟ್ಟು ಉಪ್ಲಾಡಿ, ಉಪ್ಲಾಡಿ ಶಿವಾನಂದ ನಾೈರಿ, ಪಲ್ಲವಿ ಪೂಜಾರಿ ಬಡಾಬೆಟ್ಟು ಹಾಗೂ ಚೈತ್ರಾ ಇವರು ಕಾರ್ಯಕ್ರಮದ ನೇತೃತ್ವ ವಹಿಸಿದರು.

ಬನ್ನಾಡಿ ಗ್ರಾಮದ ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

Leave a Reply

Your email address will not be published. Required fields are marked *