• Sat. Sep 30th, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟ ಪಡುಕರೆ ಪದವಿಪೂರ್ವ ಕಾಲೇಜಿನಲ್ಲಿ ಆಕರ್ಷಕ ಮಾದರಿಗಳು
ವ್ಯವಹಾರ ಲೋಕದ ದರ್ಶನ ಮಾಡಿಸಿದ ಫೆಸ್ಟ್ ಡಾಟ್ ಕಾಮ್

ByKiran Poojary

Sep 17, 2023

ಕೋಟ: ಕಪ್ಪು ಬಿಳುಪಿನ ಪುಟಗಳಲ್ಲಿ, ಅಕ್ಷರ ರೂಪದಲ್ಲಿ ನೀರಸವಾಗಿ ಮಲಗಿದ್ದ ಪರಿಕಲ್ಪನೆಗಳೆಲ್ಲ ಬಣ್ಣ ಬಣ್ಣದ ಆಕೃತಿ ತಳೆದು ಆಕರ್ಷಕ ಮಾದರಿಗಳಾಗಿ ಮೈದಳೆದ ಬಗೆ ವೀಕ್ಷಕರ ಬೆರಗಿಗೆ ಕಾರಣವಾಯಿತು.

ಎರಡು ಆಯಾಮದ (2ಡಿ) ವ್ಯವಹಾರ ಅಧ್ಯಯನದ ಅಮೂರ್ತ ಪರಿಕಲ್ಪನೆಗಳಿಗೆ ಮೂರು ಆಯಾಮದ (3ಡಿ) ಮಾದರಿಗಳ ಮೂರ್ತ ರೂಪ ನೀಡಿದ ಮಣೂರು ಪಡುಕರೆಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಭಿನ್ನ ಯೋಚನಾ ಕ್ರಮ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.

ಉದ್ದಿಮೆಗಳ ಕಾರ್ಯನಿರ್ವಹಣೆಯ ರೀತಿ, ಬ್ಯಾಂಕ್‍ಗಳ ಕಾರ್ಯವಿಧಾನ, ಇ- ವ್ಯವಹಾರ, ಜಿಎಸ್‍ಟಿ ತೆರಿಗೆ ಪದ್ಧತಿ, ವ್ಯಾಪಾರ ಸಂಬಂಧಿ ವಿಮೆಯ ವಿಧಗಳು, ಸಾರಿಗೆ ಮತ್ತು ಸಂಪರ್ಕ ವಿಧಾನಗಳು, ಎಟಿಎಮ್ ಕಾರ್ಯ ನಿರ್ವಹಣೆಯ ವಿಧಾನ, ಮುಂತಾದ ಪರಿಕಲ್ಪನೆಗಳನ್ನು ಆಧರಿಸಿ ವಿದ್ಯಾರ್ಥಿಗಳು ಮಾದರಿಗಳನ್ನು ರಚಿಸಿದ್ದರು.
ಅಲ್ಲದೇ ಉದ್ದಿಮೆಗಳ ಲೋಗೋ ಗುರುತಿಸುವ, ಬ್ಯಾಲೆನ್ಸ್ ಶೀಟ್ ಸರಿದೂಗಿಸುವ ಹಾಗೂ ಅಂಕೆಗಳ ಸ್ಮರಣೆಯ ಆಟಗಳು ಬುದ್ಧಿಗೆ ಕಸರತ್ತು ನೀಡಿ, ಮನೋರಂಜನೆಯನ್ನೂ ಒದಗಿಸಿದವು.

ಪ್ರದರ್ಶನದ ಉದ್ಘಾಟನೆ:
ಕಾಲೇಜು ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಆನಂದ ಸಿ ಕುಂದರ್ ದೀಪ ಬೆಳಗಿಸಿ ಪ್ರದರ್ಶನವನ್ನು ಉದ್ಘಾಟಿಸಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆಯ ಪ್ರಾಂಶುಪಾಲರಾದ ಡಾ. ಸುನೀತಾ, ಪ್ರಾಧ್ಯಾಪಕರಾದ ಶಂಕರ್ ನಾಯ್ಕ್, ಕಾಲೇಜು ಶೈಕ್ಷಣಿಕ ಸಮಿತಿಯ ಸದಸ್ಯರಾದ ಜಯರಾಮ ಶೆಟ್ಟಿ, ಪ್ರಾಂಶುಪಾಲ ಡೆನಿಸ್ ಬಾಂಜಿ, ಗೀತಾನಂದ ಫೌಂಡೇಶನ್‍ನ ಸಮಾಜ ಕಾರ್ಯ ವಿಭಾಗದ ಸಂಯೋಜಕ ರವಿಕಿರಣ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಾತ್ವಿಕ್ ಸ್ವಾಗತಿಸಿ, ಸವನ್ ವಂದಿಸಿದರು. ವಿದ್ಯಾರ್ಥಿನಿ ಶೃದ್ಧಾ ಕಾರ್ಯಕ್ರಮ ನಿರ್ವಹಿಸಿದರು.

ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ ಹಾಗೂ ಕೌಶಲಗಳ ಅಭಿವ್ಯಕ್ತಿಗೆ ಈ ಪ್ರದರ್ಶನವು ಸೂಕ್ತ ವೇದಿಕೆ ಒದಗಿಸಿದೆ. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಖುಷಿ ನೀಡಿದೆ.”

ಆನಂದ ಸಿ ಕುಂದರ್, ಕಾಲೇಜು ಶೈಕ್ಷಣಿಕ ಸಮಿತಿಯ ಅಧ್ಯಕ್ಷರು.

ಪಠ್ಯಪುಸ್ತಕಗಳ ಮೂಲಕ ಕಲಿತ ವಿಷಯಗಳು ಮನದಟ್ಟಾಗಲು ಇಂತಹ ಕ್ರಿಯಾತ್ಮಕ ಚಟುವಟಿಕೆಗಳು ಅಗತ್ಯ. ಮಾರ್ಗದರ್ಶನ ನೀಡಿದ ಉಪನ್ಯಾಸಕರಿಗೆ ಅಭಿನಂದನೆಗಳು

ಡೆನಿಸ್ ಬಾಂಜಿ, ಪ್ರಾಂಶುಪಾಲರು

ವಿದ್ಯಾರ್ಥಿಗಳಲ್ಲಿ ತಂಡ ಸ್ಪೂರ್ತಿ ಹಾಗೂ ಖುಷಿಯ ಕಲಿಕೆ ನೀಡಲು ಈ ಚಟುವಟಿಕೆ ಬಳಕೆಯಾಗಿದೆ. ಅವರ ನಿರ್ವಹಣೆ ಖುಷಿ ನೀಡಿದೆ.
ಅಕ್ಷತಾ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ

“ತರಗತಿಯ ಪಾಠಗಳನ್ನು ಪ್ರಾಯೋಗಿಕವಾಗಿ ಸಂಭ್ರಮದಿಂದ ಕಲಿಯಲು ಈ ಪ್ರದರ್ಶನದಿಂದ ಸಾಧ್ಯವಾಯಿತು.”
ಸುಶಾಂತ, ವಿದ್ಯಾರ್ಥಿ.

ಮಣೂರು ಪಡುಕರೆಯ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಭಿನ್ನ ಯೋಚನಾ ಕಾರ್ಯಕ್ರಮವನ್ನು ಕಾಲೇಜು ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಆನಂದ ಸಿ ಕುಂದರ್ ದೀಪ ಬೆಳಗಿಸಿ ಪ್ರದರ್ಶನವನ್ನು ಉದ್ಘಾಟಿಸಿದರು.

Leave a Reply

Your email address will not be published. Required fields are marked *