ಶಾಲಾ ಅಭಿವೃದ್ಧಿ ಸಮಿತಿಯವರ ಸಹಕಾರದೊಂದಿಗೆ ಶಾಲೆಯಲ್ಲಿ ಅದ್ದೂರಿ ಗಣೇಶೋತ್ಸವ
ಬಾದಾಮಿ ತಾಲೂಕಿನ ರಾಘಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಎಸ್,ಡಿ,ಎಂ,ಸಿ ಸಮಿತಿಯ ಯುವ ಮಿತ್ರರು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಊರಿನ ಗ್ರಾಮಸ್ಥರು, ಜೊತೆಗೆ ಶಾಲಾ ಸಿಬ್ಬಂದಿಗಳ ಸಹಕಾರದೊಂದಿಗೆ ಇಂದು ನಮ್ಮ ಶಾಲೆಯಲ್ಲಿ ಶುಭಕೃತ ನಾಮ ಸಂವತ್ಸರದ ಭಾದ್ರಪದ ಮಾಸದ ಮೊದಲ ಹಬ್ಬವಾದ” ಶ್ರೀ ಗೌರಿ ಗಣೇಶ ಹಬ್ಬವನ್ನು” ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ನೂತನವಾಗಿ ಆಯ್ಕೆಯಾದ ಉತ್ಸಾಹಿ ಸಮಿತಿಯು ಶಾಲೆಗೆ ಗಣೇಶ ಮೂರ್ತಿಯನ್ನು ಕೊಡಿಸುವುದರೊಂದಿಗೆ ಗ್ರಾಮದ ಸಮಸ್ತ ಜನರಿಗೆ ಅನ್ನ ಸಂತರ್ಪಣಾ ಕಾರ್ಯವನ್ನು ಏರ್ಪಡಿಸಿದ್ದರು. ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಸಿಹಿ ಹಾಗೂ ಹಬ್ಬದ ಪರಿಕರಗಳನ್ನು ನೀಡಿದರು. ಶಾಲಾ ಅಭಿವೃದ್ಧಿಗೆ ಶ್ರಮಿಸುವಲ್ಲಿ ಈ ಸಮಿತಿಯು ಸಮಾಜಕ್ಕೆ ಆದರ್ಶಪ್ರಾಯವಾಗಿರುವುದು ಸ್ವಾಗತಾರ್ಹ ವಿಷಯವಾಗಿದೆ ಮುಂದಿನ ಐದು ವರ್ಷದ ಅವಧಿಯವರೆಗೂ ಶಾಲೆಯ ಸಮಗ್ರ ಏಳಿಗೆ ಹಾಗೂ ಅಭಿವೃದ್ಧಿಗಾಗಿ ತನು,ಮನ, ಧನ,ದೊಂದಿಗೆ ಸಹಕಾರ ನೀಡುತ್ತೇವೆಂದು ಈ ಕಾರ್ಯಕ್ರಮದ ಮೂಲಕ ಆಶ್ವಾಸನೆಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಕಲ್ಲಯ್ಯ ಒಡೆಯರ್ ಹಾಗೂ ಉಪಾಧ್ಯಕ್ಷರಾದ ಲಲಿತಾ ಬಂದಿವಡ್ಡರ, ಸದಸ್ಯರಾದ ಜಗದೀಶ ಉಂಡಿ, ಬಸಪ್ಪ ಈರಗಾರ ಗ್ರಾಮ ಪಂಚಾಯತ ಸದಸ್ಯರಾದ ಬಸವರಾಜ ಕುರುಬಣ್ಣವರ, ರಂಗಪ್ಪ ಕೇಸನೂರ,ಮಾರುತಿ ಜಮೀನ್ದಾರ, ಮುತ್ತು ಭಜಂತ್ರಿ, ತಾಲೂಕಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಯಮನಪ್ಪ ಬಂದಿವಡ್ಡರ, ಊರಿನ ಪ್ರಮುಖರಾದ ತಿಪ್ಪಣ್ಣ ಮುತ್ತಲಗೇರಿ, ಮಂಜುನಾಥ ಬೆನಕನವಾರಿ ಪಾದಪ್ಪ ಮುತ್ತಲಗೇರಿ ಹಾಗೂ ಶಾಲೆಯ ಸಿಬ್ಬಂದಿವರ್ಗ ಮುದ್ದು ಮಕ್ಕಳೊಂದಿಗೆ ಸೌಹಾರ್ದಯುತವಾಗಿ ,ಯಶಸ್ವಿಯಾಗಿ ಈ ಹಬ್ಬವನ್ನು ಆಚರಿಸಲಾಯಿತು.