
ಕೋಟ: ಇಲ್ಲಿನ ಕೋಟ ಪಡುಕರೆ ಐಸ್ ಪ್ಯ್ಲಾಂಟ್ ಸಮೀಪ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇವರಿಂದ ನಡೆಸಲ್ಪಡುವ ಶ್ರೀ ಗಣಪನಿಗೆ 25ನೇ ಬೆಳ್ಳಿ ಹಬ್ಬದ ಸಂಭ್ರಮ ಆ ಪ್ರಯುಕ್ತ ರಜತ ಪರ್ವ ಎಂಬ ಶೀರ್ಷಿಕೆಯಡಿ ಮೂರು ದಿನಗಳ ಕಾಲ ವಿಜೃಂಭಣೆ ಗಣೇಶೋತ್ಸವ ಕಾರ್ಯಕ್ರಮ ಆಯೋಜಿಸಿದೆ. ಅಲ್ಲದೆ 20ರ ಬುಧವಾರ ಸಂಜೆ ಸ್ಥಳೀಯ ದಾನಿಗಳಾದ ಆನಂದ್ ಸಿ ಕುಂದರ್ ದಂಪತಿಗಳಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಮಂಗಳವಾರ ಕೋಟ ಗಾಯಿತ್ರಿ ಆರ್ಟ್ಸ್ ನಿಂದ ಮೆರೆವಣಿಗೆಯ ಮೂಲಕ ಶ್ರೀ ಗಣಪನನ್ನು ಪಡುಕರೆ ಫೀಶರೀಶ್ ರಸ್ತೆಯ ಮೂಲಕ ಕೊಂಡ್ಯೊಯ್ಯಲಾಯಿತು. ತಟ್ಟಿರಾಯ,ಚಂಡೆಯ ಕರತಾಳನದ ನಡುವೆ . ಸ್ಥಳೀಯ ಮಹಿಳೆಯರು ಕರದಲ್ಲಿ ಕಳಶ ಹಿಡಿದು ಭವ್ಯ ಮೆರವಣಿಗೆ ಪಾಲ್ಗೊಂಡರು.













Leave a Reply