Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶ್ರೀ ಗುರುನರಸಿಂಹ ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘ ನಿ ಸಾಲಿಗ್ರಾಮ ಇದರ ವಾರ್ಷಿಕ ಸಾಮಾನ್ಯ ಸಭೆ
ನಿರಂತರ ಎಂಟು ವರ್ಷಗಳಿಂದ ಶೇ.25ರ ಪಾಲು ಮುನಾಫೆ

ಕೋಟ: ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಇದರ 13ನೆಯ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಆಡಳಿತ ಕಛೇರಿಯಲ್ಲಿ ಸಹಕಾರಿಯ ಅಧ್ಯಕ್ಷ ಆನಂದ ಸಿ.ಕುಂದರ್‍ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.

ಗತ ವರ್ಷದಲ್ಲಿ ಸದಸ್ಯರಿಂದ ರೂ. 12.00 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿ ರೂ. 11.00 ಕೋಟಿಗೂ ಅಧಿಕ ಸಾಲ ವಿತರಿಸಿದೆ. ಸದಸ್ಯರ ವಲಿಸೂವುದರ ಮೂಲಕ ಶೇ. 98ರ ವಸೂಲಿ ಸಾಧಿಸಿದೆ. 2022.23ನೇ ಶೈಕ್ಷಣಿಕ ವರ್ಷದಲ್ಲಿ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶಾಲಾವಾರು ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಮತ್ತು ಸದಸ್ಯರ ಮಕ್ಕಳನ್ನು ಪುರಸ್ಕರಿಸಿ ಅಭಿನಂದಿಸಲಾಯಿತು.
ಪ್ರತಿಭಾ ಪುರಸ್ಕಾರದೊಂದಿಗೆ 2022-23ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ P.U.ಅ. ಕಲಾ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಕುಮಾರಿ ಆತ್ಮಿಕಾ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸಂಘದ ಕಾರ್ಯಕ್ಷೇತ್ರದಲ್ಲಿ ನಿಸ್ವಾರ್ಥ ಅನುಪಮ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಗರಿಕರುಗಳಾದ ಸಮಾಜಸೇವೆ ವೈ.ಎಸ್.ನಾಗರಾಜ ಹೊಳ್ಳ ಯೆಡಬೆಟ್ಟು ,ಜಾನಪದ ಸಾಧಕರಾದ ಮಂಜ ಪೂಜಾರಿ ಬನ್ನಾಡಿ , ಕೊಲ್ಲು ಪೂಜಾರ್ತಿ ಬನ್ನಾಡಿ, ಅಜಿಮಾಬಿ ಗುಂಡ್ಮಿ, ನಾಟಿವೈದ್ಯೆ ಮೇರಿ ಡಿ’ ಸಿಲ್ವ ಕುಮ್ರಗೊಡು ಇವರುಗಳನ್ನು ಗೌರವಿಸಿ ಅಭಿನಂದಿಸಲಾಯಿತು.

ಕಳೆದ ಸಾಲಿನಲ್ಲಿ ಗಳಿಸಿದ ನಿವ್ವಳ ಲಾಭವನ್ನು ವಿಂಗಡಿಸಿ ಸದಸ್ಯರಿಗೆ ಶೇ. 25ರ ಪಾಲು ಮುನಾಫೆ ನೀಡಲಾಯಿತು. ಕಳೆದ ನಿರಂತರ ಎಂಟು ವರ್ಷಗಳಿಂದ ಶೇ. 25ರ ಗರಿಷ್ಟ ಪಾಲು ಮುನಾಫೆ ನೀಡಿ ಪ್ರಾಥಮಿಕ ರಂಗದಲ್ಲಿ ದಾಖಲೆ ನಿರ್ಮಿಸಿದೆ.

ಸಂಸ್ಥೆಯ ಅಧ್ಯಕ್ಷ ಆನಂದ್ ಸಿ ಕುಂದರ್ ಮಾತನಾಡಿ ಸಂಘವು ಆರಂಭದಿಂದಲೂ ಪ್ರಜ್ಞಾವಂತ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ದಕ್ಷ ಆಡಳಿತ ಮಂಡಳಿಯ ಮಾರ್ಗದರ್ಶನ ಮತ್ತು ನಿಷ್ಟಾವಂತ ಸಿಬಂಧಿಯವರ ಪ್ರಾಮಾಣಿಕ ಸೇವೆಯಿಂದ ಲಾಭದಲ್ಲಿ ಮುನ್ನಡೆಯುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಘದ ವಿವಿಧ ಸೇವೆಗಳ ಸದುಪಯೋಗ ಪಡೆಯುವಂತೆ ಕರೆಯಿತ್ತರು.

ಸಭೆಯಲ್ಲಿ ಸಂಘದ ಎಲ್ಲಾ ನಿರ್ದೇಶಕರುಗಳು ಸಭಾ ಕಾರ್ಯಸೂಚಿಯಂತೆ ವಿಷಯವನ್ನು ಮಂಡಿಸಿ ವಿವರಣೆಗಳನ್ನು ನೀಡಿ ಆನುಮೋದನೆ ಪಡೆಯಲಾಯಿತು. ಸಭೆಯಲ್ಲಿ ನಿರ್ದೇಶಕರುಗಳಾದ ಸಂಜೀವ ಜಿ, ಮಂಜುನಾಥ ಎಸ್.ಕೆ, ಡಾ. ಕೆ ಕೃಷ್ಣ ಕಾಂಚನ್, ಕೆ ಶಂಕರ ಬಂಗೇರ, ವಸಂತ ಶೆಟ್ಟಿ, ಡಾ. ಸತೀಶ ಪೂಜಾರಿ, ವೈ ಕೃಷ್ಣಮೂರ್ತಿ ಐತಾಳ, ಶಾಂತಾ ಭಟ್ಟ, ನಾಗರತ್ನ ಬಾಯರಿ, ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ ಎಸ್ ಸೋಮಯಾಜಿಯವರು ವಾರ್ಷಿಕ ವರ್ಷದ ವರದಿ ಮಂಡಿಸಿದರು. ನಿರ್ದೇಶಕಿ ಶಾಂತಾ ಭಟ್ಟ ವಂದನಾರ್ಪಣೆಗೈದರು.

ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಇದರ 13ನೆಯ ವಾರ್ಷಿಕ ಸಾಮಾನ್ಯ ಸಭೆಯಲಿ ್ಲಸಂಘದ ಕಾರ್ಯಕ್ಷೇತ್ರದಲ್ಲಿ ನಿಸ್ವಾರ್ಥ ಅನುಪಮ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಗರಿಕರುಗಳಾದ ಸಮಾಜಸೇವೆ ವೈ.ಎಸ್.ನಾಗರಾಜ ಹೊಳ್ಳ ಯೆಡಬೆಟ್ಟು ,ಜಾನಪದ ಸಾಧಕರಾದ ಮಂಜ ಪೂಜಾರಿ ಬನ್ನಾಡಿ , ಕೊಲ್ಲು ಪೂಜಾರ್ತಿ ಬನ್ನಾಡಿ, ಅಜಿಮಾಬಿ ಗುಂಡ್ಮಿ, ನಾಟಿವೈದ್ಯೆ ಮೇರಿ ಡಿ’ ಸಿಲ್ವ ಕುಮ್ರಗೊಡು ಇವರುಗಳನ್ನು ಗೌರವಿಸಿ ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *