
ಕೋಟ: ರಸರಂಗ ಕೋಟವು ನಿರಂತರವಾಗಿ ನಡೆಯಿಸಿಕೊಂಡು ಬರುತ್ತಿರುವ ರಂಗ ತಾಲೀಮು ಹಾಗೂ ಕಲಿಕಾ ಪ್ರದರ್ಶನಗಳು ದೊಡ್ಡವರ ಹಾಗೂ ಮಕ್ಕಳ ಕಲಾ ಅಭಿವ್ಯಕ್ತಿಗೆ ಉತ್ತಮ ವೇದಿಕೆಯಾಗಿದೆ ಎಂದು ಶಿಕ್ಷಕಿ ಕಲಾವಿದೆ ಮಹಾಲಕ್ಷ್ಮೀ ಸೋಮಯಾಜಿ ನುಡಿದರು.
ರಸರಂಗ ಕೋಟ ಇವರು ಶ್ರೀ ಗಣೇಶ ಚತುರ್ಥಿಯ ಅಂಗವಾಗಿ ಕೋಟದ ಕದ್ರಿಕಟ್ಟು ಇಲ್ಲಿ ಹಮ್ಮಿಕೊಂಡಿದ್ದ ಯಕ್ಷಗಾನ ತಾಳಮದ್ದಲೆ ಕಲಿಕಾ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೋಟ ಮಹಿಳಾ ಮಂಡಳದ ಮಾಜಿ ಅಧ್ಯಕ್ಷೆ ನಾಗರತ್ನ ಐತಾಳ್ ನೆರವೇರಿಸಿ ಸಂಸ್ಥೆಗೆ ಶುಭ ಹಾರೈಸಿದರು. ಮಹಿಳಾ ಮಂಡಳ ಕೋಟ ಇದರ ಅಧ್ಯಕ್ಷೆ ಸುಶೀಲಾ ಸೋಮಶೇಖರ್ ಉಪಸ್ಥಿತರಿದ್ದರು. ಈ ವೇಳೆ ನಾಗರತ್ನ ಐತಾಳ್ ಇವರನ್ನು ಗೌರವಿಸಲಾಯಿತು. ರಸರಂಗದ ಅಧ್ಯಕ್ಷೆ ಸುಧಾ ಮಣೂರು ಪ್ರಸ್ತಾವಿಸಿ ಸ್ವಾಗತಿಸಿದರು. ಪಾರ್ವತಿ ಮಯ್ಯ ವಂದಿಸಿದರು. ಸುಮನಾ ಹೇರಳೆ ನಿರೂಪಿಸಿದರು.
ತದನಂತರ ದಾರುಕ ರಾಯಭಾರ ಯಕ್ಷಗಾನ ತಾಳಮದ್ದಲೆ ಪ್ರಸ್ತುತಗೊಂಡಿತು.
ರಸರಂಗ ಕೋಟ ಇವರು ಶ್ರೀ ಗಣೇಶ ಚತುರ್ಥಿಯ ಅಂಗವಾಗಿ ಕೋಟದ ಕದ್ರಿಕಟ್ಟು ಇಲ್ಲಿ ಹಮ್ಮಿಕೊಂಡಿದ್ದ ಯಕ್ಷಗಾನ ತಾಳಮದ್ದಲೆ ಕಲಿಕಾ ಪ್ರದರ್ಶನದ ಕಾರ್ಯಕ್ರಮದಲ್ಲಿನಾಗರತ್ನ ಐತಾಳ್ ಇವರನ್ನು ಗೌರವಿಸಲಾಯಿತು.













Leave a Reply