
ಅಂಬಲಪಾಡಿ ಗ್ರಾಮ ಪಂಚಾಯತ್ ನ 2022-2023 ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರಗಳ ಜಮಾಬಂದಿ ಕಾರ್ಯಕ್ರಮವು 20/09/2023 ಬಧವಾರದಂದು ಅಂಬಲಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸುಜಾತ ಯೋಗೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಜಮಾಮಂದಿ ಅಧಿಕಾರಿಯಾಗಿ ಸಹಾಯಕ ಲೆಕ್ಕಾಧಿಕಾರಿ ಮೆಲ್ವಿನ್ ಥಾಮಸ್ ಬಾಂಜಿ ತಾಲೂಕು ಪಂಚಾಯತ್ ಉಡುಪಿ, ಉಪಾಧ್ಯಕ್ಷರಾದ ಸುಜಾತ ಸುಧಾಕರ್, ನಿಕಟ ಪೂರ್ವ ಅಧ್ಯಕ್ಷರಾದ ರೋಹಿಣಿ ಎಸ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಹರೀಶ್ ಪಾಲನ್, ಪ್ರಮೋದ್ ಸಾಲಿಯಾನ್, ಉಷಾ ಶೆಟ್ಟಿ, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ವಸಂತಿ, ಸಹಾಯಕರಾಗಿ ಕಲ್ಯಾಣಪುರ ಗ್ರಾಮ ಪಂಚಾಯತ್ ನ ಸುನೀತಾ, ದಿನಕರ ಬೆಂಗ್ರೆ ಕಾರ್ಯದರ್ಶಿ ಕೆಮ್ಮಣ್ಣು ಗ್ರಾಮ ಪಂಚಾಯತ್ ಮತ್ತು ಅಂಬಲಪಾಡಿ ಗ್ರಾಮ ಪಂಚಾಯತ್ ನ ಸ್ತ್ರೀ ಶಕ್ತಿ ಸಂಜೀವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು,
ಪಂಚಾಯತ್ ಸಿಬ್ಬಂದಿಗಳಾದ ಸನಿಲ್ ಕುಮಾರ್, ವಿಶ್ವನಾಥ್, ಸುಜಾತ, ಸುಮನ್, ಶಂಕರ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಅಭಿವುಧ್ದಿ ಅಧಿಕಾರಿಯಾದ ವಸಂತಿ ಅವರು ನಿರೂಪಿಸಿದರು.













Leave a Reply