
ಕೋಟ: ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜಜೋಧ್ಧಾರಕ ಸಂಘ ಸಾಲಿಗ್ರಾಮ , ವಿಶ್ವಕರ್ಮ ಕಲಾವ್ರಂದ ಸಾಲಿಗ್ರಾಮ, ವಿಶ್ವ ಜ್ಯೋತಿ ಮಹಿಳಾ ಬಳಗ ಸಾಲಿಗ್ರಾಮ ಜಂಟಿ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮ ಸೆ.17 ಭಾನುವಾರ ವಿಶ್ವಕರ್ಮ ಸಭಾಂಗಣದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಬ್ರಾಯ ಆಚಾರ್ಯ ಮಣೂರು ವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಕೇಶವ ಆಚಾರ್ಯ ಗುಂಡ್ಮಿ ಹಾಗೂ ಶಂಕರ ಆಚಾರ್ಯ ಪಾಂಡೇಶ್ವರ ದಂಪತಿಗಳನ್ನು ಸನ್ಮಾನಿಸಲಾಯಿತು.
ಚಿತ್ರ ಹಾಗೂ ರಂಗೋಲಿ ಕಲಾವಿದೆ ಸ್ಪೂರ್ತಿ ಆಚಾರ್ಯ ಮತ್ತು ಸಮಾಜಸೇವಕ ವಿನಯಚಂದ್ರ ಸಾಸ್ತಾನ, ಇವರನ್ನು ಅಭಿನಂದಿಸಲಾಯಿತು.
ಪಾಂಡೇಶ್ವರ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾದ ವೈ ಬಿ ರಾಘವೇಂದ್ರ ಆಚಾರ್ಯ ಹಾಗೂ ಕರಾಟೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸಂಹಿತಾ ಆಚಾರ್ಯ ಕಾರ್ಕಡ ಇವರನ್ನು ಗುರುತಿಸಿ ಗೌರವಿಸಲಾಯಿತು. ದಿವಂಗತ ಗೋಪಾಲಕೃಷ್ಣ ಆಚಾರ್ಯ ಸ್ಮರಣಾರ್ಥ ಎಸ್‍ಎಸ್‍ಎಲ್‍ಸಿ,ದ್ವಿತೀಯ ಪಿಯುಸಿಯಲ್ಲಿ ಶೇ.75 ಕಿಂತ ಅಧಿಕ ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಕುಂದಾಪುರ ಭಂಡಾರ್ಕಸ್ ಕಾಲೇಜಿನ ಪ್ರಾಂಶುಪಾಲ ಶುಭಕರ ಆಚಾರ್ಯ, ಸಾಂಸ್ಕ್ರತಿಕ ಚಿಂತಕಿ ರೂಪಾ ವಸುಂಧರಾ ಆಚಾರ್ಯ ಪಡುಬಿದ್ರಿ, ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜಜೋಧ್ಧಾರಕ ಸಂಘ ಸಂಘದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಚೇಂಪಿ, ವಿಶ್ವಕರ್ಮ ಕಲಾವೃಂದ ಅಧ್ಯಕ್ಷ ವೆಂಕಟೇಶ್ ಆಚಾರ್ಯ ಸಾಲಿಗ್ರಾಮ, ವಿಶ್ವ ಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ಸವಿತಾ ಚಂದ್ರಶೇಖರ ಆಚಾರ್ಯ, ಸಂಘದ ಉಪಾಧ್ಯಕ್ಷ ರಾಘವೇಂದ್ರ ಆಚಾರ್ಯ ಸಾಹೇಬರಕಟ್ಟೆ,ರಮೇಶ್ ಆಚಾರ್ಯ ಉಪಸ್ಥಿತರಿದ್ದರು.
ವೆಂಕಟೇಶ ಆಚಾರ್ಯ ಸ್ವಾಗತಿಸಿದರೆ. ಕಲಾವೃಂದದ ಅಜಿತ್ ಆಚಾರ್ಯ ಕಾರ್ಯಕ್ರಮ ನಿರೂಪಿದರು.ಕೇಶವ ಆಚಾರ್ಯ ವಂದಿಸಿದರು. ಸಮಾಜದ ಪುಟಾಣಿಗಳು ಹಾಗೂ ಮಹಿಳಾ ಬಳಗದ ಸದಸ್ಯರಿಂದ ನೃತ್ಯ ಹಾಗೂ ವಿಶ್ವಕರ್ಮ ಕಲಾವೃಂದದ ಸದಸ್ಯರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜಜೋಧ್ಧಾರಕ ಸಂಘ ಸಾಲಿಗ್ರಾಮ , ವಿಶ್ವಕರ್ಮ ಕಲಾವ್ರಂದ ಸಾಲಿಗ್ರಾಮ, ವಿಶ್ವ ಜ್ಯೋತಿ ಮಹಿಳಾ ಬಳಗ ಸಾಲಿಗ್ರಾಮ ಜಂಟಿ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮದಲ್ಲಿ ಹಿರಿಯರಾದ ಕೇಶವ ಆಚಾರ್ಯ ಗುಂಡ್ಮಿ ದಂಪತಿಗಳನ್ನು ಸನ್ಮಾನಿಸಲಾಯಿತು.
.













Leave a Reply