Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಹಂದಟ್ಟು 23ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
ಗಣೇಶೋತ್ಸವ ಕಾರ್ಯಕ್ರಮಗಳು ಸಾಮರಸ್ಯದ ಸಂಕೇತ- ಆನಂದ್ ಸಿ ಕುಂದರ್

ಕೋಟ: ಗಣೇಶೋತ್ಸವ ಕಾರ್ಯಕ್ರಮಗಳು ಆಡಂಬರಕ್ಕೆ ವೇದಿಕೆಯಾಗದೆ ಅರ್ಥಪೂರ್ಣವಾಗಿ ಆಚರಿಸಿಕೊಂಡಾಗ ಅದರ ನೈಜತೆ ಅನಾವರಣಗೊಳ್ಳುತ್ತದೆ ಎಂದು ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.

ಕೋಟದ ಹಂದಟ್ಟು ದಾನಗುಂದು ಬಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೆಳೆಯರ ಬಳಗ ಹಂದಟ್ಟು ಇವರ ಆಶ್ರಯದಲ್ಲಿ 23ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಬಾಲಗಂಗಾಧರ ತಿಲಕರು ದೇಶದ ಜನತೆಯನ್ನು ಒಗ್ಗೂಡಿಸುವ ಸಲುವಾಗಿ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಹೊಸ ಆಯಾಮ ನೀಡಿದರು. ಆದರೆ ಇದು ಇಂದು ಗಲ್ಲಿ ಗಲ್ಲಿಗಳಲ್ಲಿ ಪಸರಿಸಿಕೊಂಡಿದೆ ಇದು ಗ್ರಾಮದ ಒಗ್ಗಟ್ಟನ್ನು ಇನ್ನಷ್ಟು ಇಮ್ಮಡಿಗೊಳಿಸಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಆನಂದ್ ಸಿ ಕುಂದರ್,ಮಹಾಲಕ್ಷ್ನೀ ಹಂದೆ,ಸಿ ಎ ರೋಹಿತ್ ಇವರನ್ನು ಸನ್ಮಾನಿಸಲಾಯಿತು. ದಿಕ್ಸೂಚಿ ಭಾಷಣಕಾರರಾಗಿ ಕಷಕೋಡಿ ಸೂರ್ಯನಾರಾಯಣ ಭಟ್ ಆಗಮಿಸಿ ಸನಾತನ ಧರ್ಮ ಹಾಗೂ ಅದರ ಏಳುಬೀಳು, ಗಣೇಶೋತ್ಸವ ಆವರಣೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಗೆಳೆಯರ ಬಳಗ ಹಂದಟ್ಟು ಅಧ್ಯಕ್ಷ ಪ್ರಕಾಶ್ ಹಂದಟ್ಟು ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್ ಉಪಸ್ಥಿತರಿದ್ದರು.ಬಳಗದ ನಿತೀಶ್ ಸ್ವಾಗತಿಸಿದರೆ, ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿ ವಂದಿಸಿದರು.

ಕೋಟದ ಹಂದಟ್ಟು ದಾನಗುಂದು ಬಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೆಳೆಯರ ಬಳಗ ಹಂದಟ್ಟು ಇವರ ಆಶ್ರಯದಲ್ಲಿ 23ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ Àಮಾಜ ಸೇವಕ ಆನಂದ್ ಸಿ ಕುಂದರ್,ಮಹಾಲಕ್ಷ್ನೀ ಹಂದೆ,ಸಿ ಎ ರೋಹಿತ್ ಇವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *