
ರಾಮಕ್ಷತ್ರಿಯ ಯುವಕ ಮಂಡಳಿ- ಶ್ರೀ ಸೀತಾರಾಮಚಂದ್ರ ದೇವಸ್ಥಾನ,ಕುಂದಾಪುರ ಗಣೇಶೋತ್ಸವ ವಿಸರ್ಜನೆ ತಾ.23 ರಂದು ಶನಿವಾರ ನಡೆಯಲಿದೆ.
ಕುಂದಾಪುರ: ಇಲ್ಲಿನ ರಾಮಕ್ಷತ್ರಿಯ ಯುವಕ ಮಂಡಳಿ-
ಶ್ರೀ ಸೀತಾರಾಮಚಂದ್ರ ದೇವಸ್ಥಾನದ 58ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ದಿ. 23 ರಂದು ಶನಿವಾರ ಬೆಳಿಗ್ಗೆ 11ಗಂಟೆಗೆ ಗಣಹೋಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಸೇವಾಕರ್ತರಿಂದ “ಮಹಾ ಅನ್ನಸಂತರ್ಪಣೆ” ಕಾರ್ಯಕ್ರಮ ನಡೆಯಲಿರುವುದು.

ಸಂಜೆ 4.30ಕ್ಕೆ ಗಣಪತಿಯ ವಿಸರ್ಜನಾ ಪೂಜೆ, ಬಳಿಕ 5.30 ರಿಂದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ವಿಶೇಷ ತಂಡಗಳ ನೃತ್ಯ ರೂಪಕ, ಸ್ಥಬ್ಧ ಚಿತ್ರ ಹಾಗೂ ಚಿತ್ರಣದೊಂದಿಗೆ ವೈಭವದ ಪುರಮೆರವಣಿಗೆಯೊಂದಿಗೆ ಕೊಂಡೊಯ್ದು ಗಣೇಶನ ವಿಗ್ರಹವನ್ನು ಪಂಚಗಂಗಾವಳಿ ನದಿಯಲ್ಲಿ ವಿಸರ್ಜಿಸಲಾಗುವುದೆಂದು ಸಂಘಟಕರು ತಿಳಿಸಿರುತ್ತಾರೆ.













Leave a Reply