Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶಿವಮೊಗ್ಗ : ಗುಂಪುಗಳ ನಡುವೆ ಗಲಾಟೆ; ಐವರಿಗೆ ಚೂರಿ ಇರಿತ

ಶಿವಮೊಗ್ಗ: ಹಳೇ ವೈಷಮ್ಯದ ಗುಂಪು ಗಲಾಟೆಯಲ್ಲಿ ಐವರಿಗೆ ಚಾಕು ಇರಿದಿರುವ ಘಟನೆ ಶಿವಮೊಗ್ಗದ ದ್ರೌಪದಮ್ಮ ಸರ್ಕಲ್​ನಲ್ಲಿ ಸೆಪ್ಟೆಂಬರ್ 21ರ ತಡರಾತ್ರಿ ನಡೆದಿದೆ. ಪವನ್ ಹಾಗೂ ಕಿರಣ್ ಎನ್ನುವರ ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಐವರಿಗೆ ಚಾಕು ಇರಿಯಲಾಗಿದೆ.

ನಗರದಲ್ಲಿ ತಡರಾತ್ರಿ ಗುಂಪು ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಐವರಿಗೆ ಚಾಕುವಿನಿಂದ ಇರಿಯಲಾಗಿದೆ.
ಹಲ್ಲೆಗೊಳಗಾದವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಬಗ್ಗೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *