
ಕೋಟ: ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವರ ಆಶ್ರಯದಲ್ಲಿ ‘ನಿರ್ದಿಗಂತ’ ರಂಗ ತಂಡದ ಕಥೆ, ಕವನ, ಕಾದಂಬರಿ, ನಾಟಕ ಹಾಗೂ ರಂಗರೂಪಕ ‘ಗಾಯಗಳು’ ಇದರ ಪ್ರದರ್ಶನ ಸೆ. 24ರ ಆದಿತ್ಯವಾರ ಸಂಜೆ ಗಂಟೆ 6ಕ್ಕೆ ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಲಿದೆ.
ಡಾ. ಶ್ರೀಪಾದ ಭಟ್ ನಿರ್ದೇಶನದ ಈ ನಾಟಕಕ್ಕೆ ಶ್ವೇತಾ ರಾಣಿ ಸಹ ನಿರ್ದೇಶಕಿಯಾಗಿ ಸಹಕರಿಸಲಿದ್ದಾರೆ. ಅಂದು ಪ್ರಮುಖ ಅತಿಥಿಯಾಗಿ ನಾಟಕ ನಿರ್ದೇಶಕರಾದ ಡಾ. ಶ್ರೀಪಾದ ಭಟ್, ರಂಗನಿರ್ದೇಶಕರಾದ ಸದಾನಂದ ಬೈಂದೂರು, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದರಾದ ಪುನೀತ್ ಶೆಟ್ಟಿ ಕೋಟ, ರಂಗ ಸಾಹಿತಿಗಳಾದ ಶ್ರೀಮತಿ ಅಭಿಲಾಷ, ಉಪನ್ಯಾಸಕರಾದ ಸುಜಯೀಂದ್ರ ಹಂದೆ, ಯಶಸ್ವೀ ಕಲಾವೃಂದದ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಮಲ್ಯಾಡಿ ಉಪಸ್ಥಿತರಿದ್ದಾರೆ ಎಂದು ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













Leave a Reply