
ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್‍ನ ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಇತ್ತೀಚಿಗೆ ಕೋಟ ಪಂಚಾಯತ್‍ನ ಸಭಾಭವನದಲ್ಲಿ ನಡೆಯಿತು. ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಾಲತಿ ಗಿಳಿಯಾರು, ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ಶೆಣೈ , ಕಾರ್ಯದರ್ಶಿಯಾಗಿ ಪವಿತ್ರ ಶೆಟ್ಟಿ ಮಣೂರು , ಜೊತೆ ಕಾರ್ಯದರ್ಶಿಯಾಗಿ ಗಿರಿಜಮ್ಮ , ಕೋಶಾಧಿಕಾರಿಯಾಗಿ ಪವಿತ್ರ ಕೆ ಆಯ್ಕೆಯಾದರು.
ಸಂಜೀವಿನಿಯ ಸಹಾಯಕ ಯೋಜನಾಧಿಕಾರಿಯವರಾದ ಜೇಮ್ಸ್, ಬ್ರಹ್ಮಾವರ ವಲಯ ಮೇಲ್ವಿಚಾರಕಿ ಸ್ವಾತಿ, ಕೋಟ ಗ್ರಾ.ಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ, ನಿರ್ಗಮಿತ ಒಕ್ಕೂಟದ ಅಧ್ಯಕ್ಷೆ ಕಲಾವತಿ ಅಶೋಕ್,ಕಾರ್ಯದರ್ಶಿ ಶಾಂತ,ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಎಂಬಿಕೆ,ಎಲ್‍ಸಿಆರ್‍ಪಿ, ಕೃಷಿ ಉದ್ಯೋಗ ಸಖಿ ಹಾಗೂ ಸಂಜೀವಿನಿ ಸದಸ್ಯರು ಹಾಜರಿದ್ದರು.
ಒಕ್ಕೂಟದ ಭಾರತಿ ಸ್ವಾಗತಿಸಿದರು. ಎಂಬಿಕೆ ಪ್ರೇಮ ಕಾರ್ಯಕ್ರಮದ ನಿರೂಪಿಸಿ ವಂದಿಸಿದರು. ಒಕ್ಕೂಟದ ನಡಾವಳಿ ಪುಸ್ತಕ ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರ ಮಾಡಲಾಯಿತು.














Leave a Reply