
ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಗ್ರಾಮವಾಗಿ ಆಯ್ಕೆಗೊಂಡಿರುವುದರಿಂದ 4 ಮತ್ತು 5ನೇ ವಾರ್ಡ್‍ನ ಡಿಜಿಟಲ್ ಫಲಾನುಭವಿಗಳಿಗೆ ಸೆ.23ರ ಶನಿವಾರ ಸ.ಹಿ.ಪ್ರಾ.ಶಾಲೆ, ಕೋಟತಟ್ಟು ಪಡುಕರೆಯಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.
ಶಿಕ್ಷಣ ಫೌಂಡೇಶನ್‍ನ ಜಿಲ್ಲಾ ಸಂಯೋಜಕರಾದ ರೀನಾ ಎಸ್ ಹೆಗ್ಡೆ ಅವರು ಡಿಜಿಟಲ್ ಮೊಬೈಲ್ ಬಳಕೆ ಹಾಗೂ ಅದರಿಂದ ಆಗುವ ಸದುಪಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಸತೀಶ್ ಕುಂದರ್, ಸದಸ್ಯರಾದ ವಾಸು ಪೂಜಾರಿ,ರವೀಂದ್ರ ತಿಂಗಳಾಯ, ಅಶ್ವಿನಿ, ವಿದ್ಯಾ ಪಿ, ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್, ಶಿಕ್ಷಣ ಫೌಂಡೇಶನ್ ನ ತಾಲೂಕು ಸಂಯೋಜಕರಾದ ಶಿಲ್ಪ ವಿಜಯ್ ,ಕೋಟತಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯದ ಗ್ರಂಥಪಾಲಕರಾದ ಶೈಲಜಾ ಹಾಗೂ 4ಮತ್ತು 5ನೇ ವಾರ್ಡ್‍ನ ಡಿಜಿಟಲ್ ಫಲಾನುಭವಿಗಳು ಉಪಸ್ಥಿತರಿದ್ದರು.
ಕೋಟತಟ್ಟು ಗ್ರಾಮ ಪಂಚಾಯತ್ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಗ್ರಾಮವಾಗಿ ಆಯ್ಕೆಗೊಂಡಿರುವುದರಿಂದ 4 ಮತ್ತು 5ನೇ ವಾರ್ಡ್‍ನ ಡಿಜಿಟಲ್ ಫಲಾನುಭವಿಗಳಿಗೆ ಸೆ.23ರ ಶನಿವಾರ ಸ.ಹಿ.ಪ್ರಾ.ಶಾಲೆ, ಕೋಟತಟ್ಟು ಪಡುಕರೆಯಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.














Leave a Reply