
ಕೋಟ: ಕೋಟದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕೋಟ ಅಮೃತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ 48ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಸತತ ಐದು ದಿನಗಳ ಕಾಲ ವಿಜೃಂಭಣೆಯಿಂದ ಜರಗಿತು.
ಸೆ.19ರಿಂದ ಮೊದಗೊಂಡು 23ರ ಪರ್ಯಂತ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಗಣಹೋಮ ವಿವಿಧ ಧಾರ್ಮಿಕ ವಿಧಿವಿಧಾನಗಳ ನಡುವೆ ಶನಿವಾರ ಸಂಪನ್ನಗೊಂಡಿತು. ಶನಿವಾರ ನಡೆದ ವಿಸರ್ಜನೆಯಲ್ಲಿ ಕೋಟ ಅಮೃತೇಶ್ವರಿ ದೇಗುಲದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಮಣೂರು ಹಾಗೂ ಕೋಟ ಹೈಸ್ಕೂಲ್ ನಂತರ ಕೋಟ ಮಣೂರು ಪಡುಕರೆ ಕಡಲಲ್ಲಿ ಲೀನಗೊಳಿಸಲಾಯಿತು.
ಮೆರವಣಿಗೆಯಲ್ಲಿ ವಿವಿಧ ರೀತಿಯ ಸ್ಥಬ್ಭಚಿತ್ರಗಳು ಗಮನ ಸೆಳೆದವು. ಕೋಟದ ಜನತಾ ಸಂಸ್ಥೆ, ಅಮೃತ ಯುವಕ ಸಂಘ, ಅರ್ಚಕ ಯುವ ಸಂಘ, ಬಾರಿಕೆರೆ ಯುವಕ ಸಂಘ ಸ್ಥಬ್ದ ಚಿತ್ರದಲ್ಲಿ ಭಾಗಿಯಾದರು. ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಅಧ್ಯಕ್ಷ ರಮಾನಾಥ್ ಜೋಗಿ, ಕಾರ್ಯದರ್ಶಿ ಚಂದ್ರ ಆಚಾರ್, ಕೋಶಾಧಿಕಾರಿ ಶೀಲರಾಜ್ ಮತ್ತಿತರ ಪ್ರಮುಖರು ಭಾಗಿಯಾದರು.
ಕೋಟ ಸಾರ್ವಜನಿಕ ಗಣೇಶೋತ್ಸವ ಪುರಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.














Leave a Reply