
ಕೋಟ: ಸಾಧನೆಗೆ ಹಲವು ದಾರಿಗಳಿವೆ ಆದರೆ ಸಾಧಿಸುವ ಛಲದೊಂದಿಗೆ ಬಹುರೂಪಿಯಾಗಿ ಗುರುತಿಸಿಕೊಳ್ಳುವುದೆ ವಿಶಿಷ್ಟವಾದ ಸಾಧನೆಯಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಭಾನುವಾರ ಕೋಟ ಮಣೂರು ಪಡುಕರೆ ಕೆ .ಸಿ ಕುಂದರ್ ಸಭಾಂಗಣದಲ್ಲಿ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಇವರಿಗೆ ಸಾರ್ವಜನಿಕ ಹಾಗೂ ಸಂಘಸಂಸ್ಥೆಗಳಿಂದ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನರೇಂದ್ರ ಕುಮಾರ್ ಬದುಕಿನ ಆಯಾಮವೇ ಅದೇ ತರನಾಗಿದ್ದು ಅವರೊಬ್ಬ ಕಾರಂತರಂತೆ ಎಲ್ಲಾ ಕ್ಷೇತ್ರದಲ್ಲೂ ಕೈಯಾಡಿಸುವ ಸಾಧಕರಾಗಿದ್ದಾರೆ. ಕಾರಂತ ಥೀಂ ಪಾರ್ಕ್ ನಲ್ಲಿ ಡಾ.ಕಾರಂತರ ಬದುಕಿನ ಚಹರೆಗಳಿಗೆ ಮುನ್ನುಡಿ ಬರೆಯುವ ಸಾಧಕ ಶಕ್ತಿಯಾಗಿದ್ದಾರೆ.

ಶಿಕ್ಷಕರಾಗಿ ,ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿರುವ ನರೇಂದ್ರ ಕುಮಾರ್‍ಗೆ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದರಿವುದು ಹೆಮ್ಮೆಯ ವಿಷಯವಾಗಿದೆ. ಎಂದು ಅಭಿನಂದಿಸಿದೆಲ್ಲದೆ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದೆ ಆದರೆ ಆಳುವ ಸರಕಾರಗಳ ಭಿನ್ನ ಯೋಚನೆಯಿಂದ ಅದು ಅನುಷ್ಠಾನದಿಂದ ವಂಚಿತರಾಗಿದೆ ಇದಕ್ಕೆ ಶಿಕ್ಷಕರು ಧ್ವನಿಯಾಗದೆ ಮೌನವಾಗಿರುವುದು ವಿಪರ್ಯಾಸವಾಗಿದೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಈ ಬೆಳವಣಿಗೆ ಪೂರಕವಾದಲ್ಲ ಯಾವುದೇ ಸರಕಾರ ಬಂದರೂ ಅದು ಈ ವ್ಯವಸ್ಥೆಗೆ ಪೂರಕವಾಗಿದ್ದರೆ ಅನುಷ್ಠಾನಗೊಳ್ಳಬೇಕು ಎಂದು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ನರೇಂದ್ರ ಕುಮಾರ್ ಕೋಟರವರಿಗೆ ಸಾರ್ವಜನಿಕ ಅಭಿನಂದನೆ ಸಲ್ಲಿಸಲಾಯಿತು. ಸ್ಥಳೀಯ ಸಂಘಸಂಸ್ಥೆಗಳು ಗೌರವಿಸಿಕೊಂಡವು. ನರೇಂದ್ರ ಕುಮಾರ್ ಶಿಷ್ಯೆ ಪ್ರತಿಕ್ಷಾ ಗುರುವಂದನಾ ನುಡಿ ಅರ್ಪಿಸಿದರು. ಕೋಟ ವಿವೇಕ ವಿದ್ಯಾಸಂಸ್ಥೆಯ ಶಿಕ್ಷಕ ಸಂಜೀವ ಗುಂಡ್ಮಿ ಪರಿಚಯವಾಚನಗೈದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಆಶಯದ ನುಡಿಗಳನ್ನಾಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಪ್ರಶಂಸನಾ ಮಾತುಗಳನ್ನಾಡಿದರು.
ನಿವೃತ್ತ ಮುಖ್ಯ ಶಿಕ್ಷಕ ವಿಠ್ಠಲ್ ವಿ ಗಾಂವ್ಕರ್ ಅಭಿನಂದನಾ ನಡಿಗಳನ್ನಾಡಿದರು. ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಮನಸ್ಮಿತ ಫೌಂಡೇಶನ್ ಪ್ರವರ್ತಕ ಡಾ.ಪ್ರಕಾಶ್ ತೋಳಾರ್, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್,ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ ,ಉಡುಪಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶಕಿ ಪೂರ್ಣಿಮಾ,ಕಾರಂತ ಪ್ರತಿಷ್ಠಾನದ ಸದಸ್ಯರಾದ ಎಂ ಸುಬ್ರಾಯ ಆಚಾರ್ಯ,ಸುಶೀಲ ಸೋಮಶೇಖರ್, ಉಡುಪಿ ಡಯೆಟ್ ಕಾಲೇಜಿನ ಪ್ರಾಂಶುಪಾಲ ಅಶೋಕ್ ಕಾಮತ್,ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ರಾಮಚಂದ್ರ ಐತಾಳ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕ ರಮೇಶ್ ಹೆಚ್ ಕುಂದರ್ ಸ್ವಾಗತಿಸಿ ಪ್ರಾಸ್ತಾವನೆಗೈದರು. ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ಸನ್ಮಾನ ಪತ್ರ ವಾಚಿಸಿದರು.ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು.ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ನಿರಂಜನ್ ನಾಯಕ್ ವಂದಿಸಿದರು.ಥೀಂ ಪಾಕ್9ನ ಪ್ರಶಾಂತಸೂರ್ಯ,ಸುಮುಖ ಪ್ರಕಾಶ್ ಸಹಕರಿಸಿದರು.
ಭಾನುವಾರ ಕೋಟ ಮಣೂರು ಪಡುಕರೆ ಕೆ .ಸಿ ಕುಂದರ್ ಸಭಾಂಗಣದಲ್ಲಿ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಇವರಿಗೆ ಸಾರ್ವಜನಿಕ ಹಾಗೂ ಸಂಘಸಂಸ್ಥೆಗಳಿಂದ ನರೇಂದ್ರ ಕುಮಾರ್ ಕೋಟರವರಿಗೆ ಅಭಿನಂದನೆ ಸಲ್ಲಿಸಲಾಯಿತು. ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ವಿಠ್ಠಲ್ ವಿ ಗಾಂವ್ಕರ್, ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಮತ್ತಿತರರು ಇದ್ದರು.














Leave a Reply