
ಕೋಟ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ, ಶಿಶು ಅಭಿವೃದ್ಧಿ ಯೋಜನೆ, ಇವರ ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಬ್ರಹ್ಮಾವರ, ಅಂಗನವಾಡಿ ಕೇಂದ್ರ ಕೋಡಿ ಹೊಸಬೇಂಗ್ರೆ ಇವರ ಆಶ್ರಯದಲ್ಲಿ ಸ್ತ್ರೀ ಶಕ್ತಿ ಸಂಘ ಹೊಸಬೇಂಗ್ರೆ ಇವರ ಸಹಯೋಗದೊಂದಿಗೆ ಪೋಷಣ ಮಾಹೆ 2023 ಸ್ಪರ್ಧಾತ್ಮಕ ಮಹಾಆಚರಣೆ ಕಾರ್ಯಕ್ರಮ ಸೋಮವಾರ ಅಂಗನವಾಡಿ ಕೇಂದ್ರ ಹೊಸಬೆಂಗ್ರೆ ಇಲ್ಲಿ ಜರಗಿತು.
ಕಾರ್ಯಕ್ರಮವನ್ನು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುಲೋಚನಾ ದೀಪ ಬೆಳೆಸಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಮೀನಾಕ್ಷಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಬಾಲವಿಕಾಸ ಸಮಿತಿಯ ಸದಸ್ಯರಾದ ರಾಘವೇಂದ್ರ ಕಾರ್ವಿ, ಸಂತೋಷ್ ಕುಂದರ್, ವೀಣಾ, ನಿರ್ಮಲ, ಕೋಡಿ ಗ್ರಾಮಪಂಚಾಯತ್ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದೀಪಾ ಕಾರ್ವಿ, ಸ್ಥಳೀಯ ಮುಖಂಡರಾದ ಪ್ರಭಾಕರ ಬಂಗೇರ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾಮಚಂದ್ರ ಕಾರ್ವಿ ಮತ್ತು ಪೋಷಕರು, ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್ ಸ್ವಾಗತಿಸಿ ನಿರೂಪಿಸಿದರು.ಸಹಾಯಕಿ ರೋಹಿಣಿಕೆ. ಬಂಗೇರ ವಂದಿಸಿದರು.

ಗಮನ ಸೆಳೆದ ವಸ್ತುಗಳು
ಪೋಷಣ್ ಮಾಸಾಚರಣೆಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಕ್ರೀಡಾ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ಪೌಷ್ಠಿಕ ಆಹಾರ ಸ್ಪರ್ಧೆ ಏರ್ಪಡಿಸಲಾಗಿತ್ತು ಅದರಲ್ಲಿ ಫೆಡಾ, ಪತ್ರೋಡೆ, ರವ ಲಡ್ಡು, ಕ್ಯಾರೆಟ್ ಹಲ್ವಾ, ಪೌಷ್ಟಿಕ ಉಂಡೆ, ವಿವಿಧ ತರಹದ ಹಣ್ಣಿನ ಜೂಸ್‍ಗಳು, ಪಾಲಾಕ್ , ಸಬ್ಬಕ್ಕಿ, ಮೆಂಥೆ , ಹರಿವೆ,ಬಸಳೆ ಸೊಪ್ಪುಗಳು, ಔಷಧಿಯ ಸಸ್ಯಗಳು, ವಿವಿಧ ತರಕಾರಿಗಳು ಗಮನ ಸೆಳೆದವು, ಬೇಬಿ ಶೋ, ಮಕ್ಕಳಿಗೆ ಪೋಷಕರಿಗೆ ಆಟೋಟ ಸ್ಪರ್ಧೆಗಳು ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಅಂಗನವಾಡಿ ಕೇಂದ್ರ ಕೋಡಿ ಹೊಸಬೇಂಗ್ರೆ ಇವರ ಆಶ್ರಯದಲ್ಲಿ ಸ್ತ್ರೀ ಶಕ್ತಿ ಸಂಘ ಹೊಸಬೇಂಗ್ರೆ ಇವರ ಸಹಯೋಗದೊಂದಿಗೆ ಪೋಷಣ ಮಾಹೆ 2023 ಸ್ಪರ್ಧಾತ್ಮಕ ಮಹಾಆಚರಣೆ ಕಾರ್ಯಕ್ರಮವನ್ನು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುಲೋಚನಾ ದೀಪ ಬೆಳೆಸಿ ಉದ್ಘಾಟಿಸಿದರು.














Leave a Reply