
ಕೋಟ: ಶ್ರೀ ದೇವಿ ಮಾರಿಕಾಂಬ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ ಇದರ 2ನೇ ವರ್ಷದ ವಾರ್ಷಿಕ ಮಹಾಸಭೆ ಭಾನುವಾರ ಕೋಡಿಯಲ್ಲಿ ಜರಗಿತು
ಸಹಕಾರಿ ಸಂಘದ ಅಧ್ಯಕ್ಷ ಕೆ ಕೃಷ್ಣ ಮಾಸ್ಟರ್ ಜ್ಯೋತಿ ಬೆಳಗುವುದರೊಂದಿಗೆ ಸಭೆಯನ್ನು ಉದ್ಘಾಟಿಸಿ ಸಂಘದ ಕಾರ್ಯವೈಕರಿಗಳ ಬಗ್ಗೆ ಉಲ್ಲೇಖಿಸಿದರಲ್ಲದೆ ಕ್ರಮವತ್ತಾಗಿ ಸಾಲ ಮರುಪಾವತಿ ಮಾಡಿದ ಶ್ರೀಶಕ್ತಿ ಸಂಘದವರಿಗೆ ಮತ್ತು ಇತರ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು,
ಮುಖ್ಯ ಅಭ್ಯಾಗತರಾಗಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್ ,ಸಹಕಾರಿ ಕಾನೂನು ಸಲಹೆಗಾರರ ಹರ್ಷರಾಜ್ ಕೆ , ಉಪಾಧ್ಯಕ್ಷ ಅರುಣ್.ಜಿ ಕುಂದರ್, ನಿರ್ದೇಶಕರಾದ ಶುಭಕರ ಕುಂದರ್, ಪ್ರಭಾಕರ ಬಂಗೇರ, ಕೃಷ್ಣಪ್ಪ ಬಂಗೇರ, ಸುಧಾಕರ್ ಎಸ್ ಕಾಂಚನ್, ಹರ್ಷ ಕೆ ಬಿ, ದಿನೇಶ್ ಪೂಜಾರಿ, ಕರುಣಾಕರ ಖಾರ್ವಿ, ಪ್ರಕಾಶ್ ಬಂಗೇರ, ವಿನೋದ್ ಕೆ ಕುಂದರ್, ಸುಜಾತಾ ಎಸ್, ಗುಲಾಬಿ, ಪುಷ್ಪಲತಾ ಉಪಸ್ಥಿತರಿದ್ದರು.
ಸಂಘ ಆರಂಭಗೊಂಡು 1ವರೆವರ್ಷದಲ್ಲಿ 4ಕೋಟಿ 3ಲಕ್ಷ ಸಾಲ ವಿತರಿಸಿ ಕಂತು ಬಾಕಿ ಇರಿಸದೆ ವಸೂಲಾತಿಗೈದು ಅಭಿವೃದ್ಧಿ ಪಥಕ್ಕೆ ಮುನ್ನುಡಿ ಬರೆತಯತ್ತಿರುವುದಕ್ಕೆ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕ ಮಂಜುನಾಥ್ ಎಸ್.ಕೆ ಹರ್ಷ ವ್ಯಕ್ತಪಡಿಸಿದರು.
ಪಾವನಿ ಪ್ರಾಥನೆಗೈದರು , ಮುಖ್ಯಕಾರ್ಯನಿರ್ವಾಹನಾಧಿಕಾರಿ ಪವನ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಹಾಯಕರಾದ ನಿತೀಶ ಕುಮಾರ್.ಎಸ್ ಸ್ವಾಗತಿಸಿದರು. ಸಹಾಯಕಿ ಸ್ವಾತಿ ಧನ್ಯವಾದ ಸಮರ್ಪಿಸಿದರು.
ಶ್ರೀ ದೇವಿ ಮಾರಿಕಾಂಬ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ ಇದರ 2ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಕೆ ಕೃಷ್ಣ ಮಾಸ್ಟರ್ ಉದ್ಘಾಟಿಸಿದರು. ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್ ,ಸಹಕಾರಿ ಕಾನೂನು ಸಲಹೆಗಾರರ ಹರ್ಷರಾಜ್ ಕೆ ,ಉಪಾಧ್ಯಕ್ಷ ಅರುಣ್.ಜಿ ಕುಂದರ್ ಮತ್ತಿತರರು ಇದ್ದರು.














Leave a Reply