
ಕೋಟ : ಶಾಸ್ತ್ರ ಗ್ರಂಥ, ಸ್ತೋತ್ರ ಸಾಹಿತ್ಯ ಮತ್ತು ನೂರಾರು ಯಕ್ಷ ಪ್ರಸಂಗಗಳನ್ನು ತಮ್ಮ ಶ್ರೀಮನ್ಮಧ್ವಸಿದ್ಧಾಂತ ಪ್ರಕಾಶನದ ಅಡಿಯಲ್ಲಿ ಮುದ್ರಿಸಿ ದಾಖಲೆಯನ್ನು ಮೆರೆದ ಪಾವಂಜೆ ಗುರುರಾಯರ 75 ನೇ ಪುಣ್ಯದಿನದ ಸಂಸ್ಮರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕೋಟದ ಹಂದೆ ಯಕ್ಷ ವೃಂದದವರಿಂದ ನಡೆದ ಮೂಲಿಕೆ ರಾಮಕೃಷ್ಣಯ್ಯ ವಿರಚಿತ ಸುಧನ್ವ ಮೋಕ್ಷ ಯಕ್ಷಗಾನ ಪ್ರದರ್ಶನ ಸಂದರ್ಭ ಯಕ್ಷಗಾನ ಕಲಾವಿದರೂ, ಉಪನ್ಯಾಸಕರೂ ಆಗಿರುವ ಕೋಟ ಸುಜಯೀಂದ್ರ ಹಂದೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಸಂಘಟಕರಾದ ಸುಭೋದ್ ಭಟ್, ಮಧುಸೂದನ ರಾಯರು, ಲತಾ, ಸಂಯೋಜಕರಾದ ಗುರುಪ್ರಸಾದ ಪಾವಂಜೆ, ಸತೀಶ್ ಪಾವಂಜೆ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕಲಾವಿದ ಸುಜಯೀಂದ್ರ ಹಂದೆಯವರಿಗೆ ಗೌರವ ಸಂಮಾನ ನೀಡಲಾಯಿತು.
Leave a Reply