Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಮಾಜ ಸೇವಕ ಈಶ್ವರ್ ಮಲ್ಪೆ ಅವರಿಗೆ ಶ್ರೀವಿನಾಯಕ ಸಾಧನ ಶ್ರೀ ಪುರಸ್ಕಾರ

ಕೋಟ : ಶ್ರೀ ವಿನಾಯಕ ಯುವಕ ಮಂಡಲ ಸಾೈಬ್ರಕಟ್ಟೆ-ಯಡ್ತಾಡಿ ಕೊಡಮಾಡುವ 2023ನೇ ಸಾಲಿನ ಶ್ರೀವಿನಾಯಕ ಸಾಧನ ಶ್ರೀ ಪುರಸ್ಕಾರಕ್ಕೆ ಈಜುಪಟು, ಮುಳುಗು ತಜ್ಞ, ಸಮಾಜ ಸೇವೆಯ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಅಪತ್ಭಾಂಧವ ಈಶ್ವರ್ ಮಲ್ಪೆ ಅವರನ್ನು ಆಯ್ಕೆ ಮಾಡಲಾಗಿದೆ. 900 ಕ್ಕೂ ಮಿಕ್ಕಿ ಶವವನ್ನು ಮೇಲೆಕೆತ್ತಿದ, ಅದೆಷ್ಟೋ ಜೀವಗಳನ್ನು ರಕ್ಷಿಸಿದ, ಬಂದರಿನಲ್ಲಿ ಮುಳುಗಿದ ವಾಹನಗಳನ್ನು, 200ಕ್ಕೂ ಮಿಕ್ಕಿ ಮೊಬೈಲ್ ಪೋನುಗಳನ್ನು, ಬೋಟುಗಳ ಬಿಡಿ ಭಾಗಗಳನ್ನು ಮೇಲೆ ತರುವಲ್ಲಿ ಅವರ ಸಾಹಸ ಅನನ್ಯವಾದುದು.

ಇಂತಹ ಸಾಹಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೊತೆಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಈಶ್ವರ್ ಮಲ್ಪೆ ಅವರನ್ನು 2023ನೇ ಸಾಲಿನಲ್ಲಿ ಆಯ್ಕೆ ಮಾಡಲಾಗಿದೆ. ಪುರಸ್ಕಾರ ಪ್ರದಾನ ಕಾರ್ಯಕ್ರಮ ಆಕ್ಟೋಬರ್ 20 ರ ಸಂಜೆ 7.30ಕ್ಕೆ ಮಹಾತ್ಮ ಗಾಂಧಿ ಫ್ರೌಡಶಾಲೆಯಲ್ಲಿ ಸಾೈಬ್ರಕಟ್ಟೆಯಲ್ಲಿ ನಡೆಯುವ ಶ್ರೀ ಸಾರ್ವಜನಿಕ ಶಾರದೋತ್ಸವದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯತಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದೆಂದು ಯುವಕ ಮಂಡಲದ ಅಧ್ಯಕ್ಷ ನಂದೀಶ್ ನಾಯ್ಕ, ಕಾರ್ಯದರ್ಶಿ ರಾಜೇಶ್ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *