Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನೆಲ ಜಲ ಸಂರಕ್ಷಣೆಗೆ ಜಿಲ್ಲಾಡಳಿತದಿಂದ ನಿರಂತರ ಕಾರ್ಯಕ್ರಮ- ಜಿಲ್ಲಾಧಿಕಾರಿ ವಿದ್ಯಾ ಕುಮಾರಿ

ಕೋಟ: ನೆಲ-ಜಲ ಸಂರಕ್ಷಣೆ ಪ್ರತಿಯೊಬ್ಬರ ಆಧ್ಯ ಕರ್ತವ್ಯ ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ತಿಳಿಸಿದರು.
ಅವರು ಉಡುಪಿ ಜಿ.ಪಂ. ನೇತೃತ್ವದಲ್ಲಿ ಕೋಡಿ ಹಾಗೂ ಕೋಟತಟ್ಟು ಗ್ರಾ.ಪಂ. ಆಶ್ರಯದಲ್ಲಿ, ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್ ನೇತೃತ್ವದಲ್ಲಿ ವಿಶ್ವ ಕಡಲ ದಿನದ ಅಂಗವಾಗಿ ಸೆ.28ರಂದು ಪಾರಂಪಳ್ಳಿಯ ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್‍ನಲ್ಲಿ ಜರಗಿದ ನದಿ ತೀರ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸಿ ಕೊಡಬೇಕಾದರೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಸ್ವಚ್ಛ ವಾತವರಣ ನಾವು ಮುಂದಿನ ಜನಾಂಗಕ್ಕೆ ಕೊಡಬಹುದಾದ ದೊಡ್ಡ ಉಡುಗೊರೆಯಾಗಿದೆ ಎಂದರು.
ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ„ಕಾರಿ ಪ್ರಸನ್ನ ಎಚ್. ಮಾತನಾಡಿ, ನದಿ ಪಾತ್ರಗಳ ಸ್ವಚ್ಛತೆ ಕೂಡ ಇತರ ಸ್ವಚ್ಛತೆಯಷ್ಟೇ ಪ್ರಾಮುಖ್ಯತೆ ಹೊಂದಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಬೇಕಿದೆ ಎಂದರು.

ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಮುಖ್ಯ ಯೋಜನಾ„ಕಾರಿ ಶ್ರೀನಿವಾಸ ರಾವ್, ಎಸ್.ಬಿ. ಎಂ. ಸಂಯೋಜಕ ರಘುನಾಥ್ ಜಾರ್ಕಳ, ಜೆ.ಜೆ.ಎಂ. ಸಂಯೋಜಕ ಸು„ೀರ್, ಜೋಸೆಫ್ ಜಿ. ಎಮ್. ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಕೆ.ಸತೀಶ್ ಕುಂದರ್ ಬಾರಿಕೆರೆ , ಉಪಾಧ್ಯಕ್ಷೆ ಸರಸ್ವತಿ, ಕಾರ್ಯದರ್ಶಿ ಸುಮತಿ ಅಂಚನ, ಕೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ್ ಮೆಂಡನ್, ಕಾರ್ಯದರ್ಶಿ ಉಷಾ ಶೆಟ್ಟಿ, ಮಣಿಪಾಲ ವಿಶ್ವ ವಿದ್ಯಾನಿಲಯದ ಉಪನ್ಯಾಸಕ ಸಂತೋಷ್ ಹಾಗೂ ವಿದ್ಯಾರ್ಥಿಗಳು, ಕಯಾಕಿಂಗ್ ಪಾಯಿಂಟ್‍ನ ಮುಖ್ಯಸ್ಥರಾದ ಮಿಥುನ್ ಮೆಂಡನ್, ಲೋಕೇಶ್, ವಿನಯ ಮೊದಲಾದವರು ಉಪಸ್ಥಿತರಿದ್ದರು.

ಕಾಂಡ್ಲವನ ಸ್ವಚ್ಚತೆ :-
ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತ, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಅಧಿಕಾರಿಗಳು, ಗ್ರಾ.ಪಂ. ಸದಸ್ಯರು, ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕಯಾಕಿಂಗ್ ಮೂಲಕ ಕಾಂದ್ಲವನಕ್ಕೆ ತೆರಳಿ ಕಾಂಡ್ಲವನದ ಸ್ವಚ್ಛತೆ ಕೈಗೊಂಡರು ಹಾಗೂ ಈ ಸಂದರ್ಭ ಸಾಲಿಗ್ರಾಮ ಕಾಯಕಿಂಗ್ ಪಾಯಿಂಟ್ ವತಿಯಿಂದ ನಿರಂತರವಾಗಿ ನಡೆಯಲಿರುವ ಸ್ವಚ್ಛ ಸೀತಾ ನದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿಗಳು ಹಾಗೂ ಎ.ಸಿ. ಅವರು ಕಯಾಕಿಂಗ್‍ನಲ್ಲಿ ತೆರಳಿ ಕಾಂಡ್ಲವನ ಸ್ವಚ್ಛತೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *