Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಂದಾಪುರ ಮೀನುಮಾರುಕಟ್ಟೆ ಸನಿಹ ಆರಂಭಗೊಂಡ ಸಮುದ್ಯತಾ ಇನ್ ಆ್ಯಂಡ್ ಸೂಟ್ ಶುಭಾರಂಭ
ಉದ್ಯಮ ರಂಗದಲ್ಲಿ ಸಮುದ್ಯತಾ ಹೊಸ ಭಾಷ್ಯ ಬರೆಯುತ್ತಿದೆ- ಆನಂದ್ ಸಿ ಕುಂದರ್

ಕೋಟ: ಉದ್ಯಮ ರಂಗದಲ್ಲಿ ಸಮುದ್ಯತಾ ಮಾದರಿಯಾಗಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದೆ ಇದು ಇಂದಿನ ಯುವಸಮೂಹಕ್ಕೆ ದಾರಿದೀಪವಾಗಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.

ಕೋಟ ಸಮುದ್ಯತಾ ಗ್ರೂಪ್ಸ್ ಸಂಸ್ಥೆಯ ಇದರ ಭಾಗವಾಗಿ ಕುಂದಾಪುರ ಮೀನುಮಾರುಕಟ್ಟೆ ಸನಿಹ ಆರಂಭಗೊಂಡ ಸಮುದ್ಯತಾ ಇನ್ ಆ್ಯಂಡ್ ಸೂಟ್ ಹೊಸ ಉದ್ಯಮಕ್ಕೆ ಚಾಲನೆ ನೀಡಿ ಮಾತನಾಡಿ ಜೀವನದಲ್ಲಿ ಗುರು ಮತ್ತು ಗುರಿ ಎರಡು ಇರಬೇಕು ಅದೇ ರೀತಿ ಸಮುದ್ಯತಾ ಸಂಸ್ಥೆಯಲ್ಲಿರುವ ಯುವ ಸಮೂಹ ಕೂಡಾ ಅದೆರಡನ್ನು ಇರಿಸಿಕೊಂಡು ಸಾಧನೆಯ ಶಿಖರವೆರಿದೆ.

ಒಂದು ಸಂಸ್ಥೆ ಹುಟ್ಟು ಹಾಕುವುದು ಆರಂಭದಲ್ಲಿ ಸ್ವಲ್ಪ ಸುಲಭವಾಗಿರುತ್ತದೆ ಆದರೆ ಅದನ್ನು ಮುನ್ನಡೆಸಿ ಯಶಸ್ಸಿನ ತೇರಾಗಿಸುವುದು ಪ್ರಶಂಸನೀಯ ಎಂದು ಮಾಲಕ ಯೋಗೇಂದ್ರ ತಿಂಗಳಾಯ ಅವರ ಉದ್ಯಮ ಹಾಗೂ ಸಾಮಾಜಿಕ ಕಾರ್ಯವೈಕರಿಯನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಬ್ರಹ್ಮಾವರದ ಚಾರ್ಟರ್ಡ್ ಅಕೌಂಟೆಂಟ್ ಪದ್ಮನಾಭ ಕಾಂಚನ್, ಕಾಳಾವರ ವರದರಾಜ ಶೆಟ್ಟಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್ ನಾಯಕ್ , ಸಂಕೀರ್ಣದ ಮಾಲಿಕ ಸುಧೀಂದ್ರ ಪೂಜಾರಿ ಎಸ್ ಪಿ, ಸಮುದ್ಯತಾ ಗ್ರೂಪ್ಸ್‍ನ ಯೋಗೇಂದ್ರ ತಿಂಗಳಾಯ ಇದ್ದರು.

ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸಿಲ್ವರ್ ಸ್ಪೂನ್ ರೆಸ್ಟೋ ರೆಂಟ್, ಲಕ್ಸುರಿ ರೂಮ್, 8 ಸರ್ವೀಸ್ ಅಪಾರ್ಟ್‍ಮೆಂಟ್, ಸೀಬೇ ಫ್ಯಾಮಿಲಿ ರೆಸ್ಟೋರೆಂಟ್, ಸಂಭ್ರಮ ಹಾಲ್, ಸಂಬುಕಾ ಜೂಸ್ ಬಾರ್, ಸರ್ಪೈಸ್ ಇನ್ ಟೌನ್ ಎನ್ನುವ ಹಲವು ಸೇವೆಗಳು ಜನರಿಗೆ ಲಭ್ಯವಿವೆ. ಕುಂದಾಪುರದಲ್ಲಿ ಮೊದಲ ಬಾರಿಗೆ ಸರ್ವೀಸ್ ಅಪಾರ್ಟ್ ಮೆಂಟ್ಸ್ ಸೌಲಭ್ಯ ಗಳನ್ನು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ನಿರೂಪಕರಾದ ಅವಿನಾಶ್ ಕಾಮತ್, ಸಂದೇಶ್ ಶೆಟ್ಟಿ ಸೆಳ್ವಾಡಿ, ಸಂದೀಪ್ ಭಕ್ತ, ನರೇಶ್ ಕೋಟೇಶ್ವರ, ಆಕಾಶ್ ಹೆಬ್ಬಾರ್, ಆರ್.ಜೆ ಚೇತನ್ ನಿರೂಪಿಸಿದರು.

ಕೋಟ ಸಮುದ್ಯತಾ ಗ್ರೂಪ್ಸ್ ಸಂಸ್ಥೆಯ ಇದರ ಭಾಗವಾಗಿ ಕುಂದಾಪುರ ಮೀನುಮಾರುಕಟ್ಟೆ ಸನಿಹ ಆರಂಭಗೊಂಡ ಸಮುದ್ಯತಾ ಇನ್ ಆ್ಯಂಡ್ ಸೂಟ್ ಹೊಸ ಉದ್ಯಮಕ್ಕೆ ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಚಾಲನೆ ನೀಡಿದರು.

Leave a Reply

Your email address will not be published. Required fields are marked *