
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬ್ರಹ್ಮಾವರ ,ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಕೋಟ ವಲಯದ ಗಿಳಿಯಾರು ಕಾರ್ಯಕ್ಷೇತ್ರದ ಶ್ರೀ ಯಕ್ಷಿ ಜ್ಞಾನವಿಕಾಸ ಕೇಂದ್ರದ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ಮೂಡುಗಿಳಿಯಾರು ಶಾಲಾ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ ಅಧ್ಯಕ್ಷ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಉದ್ಘಾಟಿಸಿ, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಮಹಿಳೆಯರಿಗೆ ತಮ್ಮ ಪ್ರತಿಭೆ ವ್ಯಕ್ತಪಡಿಸಲು ವೇದಿಕೆಯಾಗಿದೆ ಈ ಕಾರ್ಯಕ್ರಮದಿಂದಾಗಿ ಎಷ್ಟೋ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬಂದು ತಮ್ಮನ್ನು ತಾವು ಪರಿವರ್ತನೆ ಮಾಡಿಕೊಂಡಿರುವುದು ಸಂತೋಷದ ವಿಚಾರವಾಗಿದೆ ನಮ್ಮ ಊರಿನಲ್ಲಿ ಈ ಒಂದು ಕಾರ್ಯಕ್ರಮ ಇರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಎಂದು ಹೇಳಿದರಲ್ಲದೆ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜನ ಜಾಗೃತಿ ವೇದಿಕೆಯ ವಲಯದ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಖ್ಯ ಅಭ್ಯಾಗತರಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಅಮೃತ ವಹಿಸಿದ್ದರು. ಒಕ್ಕೂಟದ ಮಾಜಿ ಅಧ್ಯಕ್ಷೆ ಯಶೋಧರ, ವಲಯದ ಮೇಲ್ವಿಚಾರಕಿ ನೇತ್ರಾವತಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತಾಲೂಕು ಸಮನ್ವಯ ಅಧಿಕಾರಿ ಪುಷ್ಪಲತ ಶೆಟ್ಟಿ ನಿರೂಪಿಸಿದರೆ , ಕೇಂದ್ರದ ಸದಸ್ಯರಾದ ರಾಧಾ ಸ್ವಾಗತಿಸಿದರು. ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸರೋಜಾ ಸಾಧನ ವರದಿ ಮಂಡಿಸಿದರು. ಕೇಂದ್ರ ಸದಸ್ಯೆ ನಯನ ವಂದಿಸಿದರು. ಕಾರ್ಯಕ್ರಮದ ಪ್ರಯುಕ್ತ ಹೋಗುಚ್ಚ ಸ್ಪರ್ಧೆ ಹಾಗೂ ಜನಪದ ನತ್ಯದ ಸ್ಪರ್ಧೆ ಹಾಗೂ ಕುಣಿತ ಭಜನೆ ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು.
ಶ್ರೀ ಕ್ಷೇತ್ರದ ಯೋಜನೆಯಿಂದ ಮಹಿಳೆಯರು ಲಾಭ ಪಡೆದು ಸ್ವಾವಲಂಬಿಗಳಾಗಿ ಅದನ್ನು ಬಿಟ್ಟು ಯೋಜನೆಯ ಹಣವನ್ನು ದುಂದುವೆಚ್ಚವಾಗಿಸಬೇಡಿ,ಪಾಶ್ಚಮಾತ್ಯ ದುಬಾರಿ ಮೆಹಂದಿ ಕಾರ್ಯಕ್ರಮಕ್ಕೆ ಕಡಿವಾಣ ಹಾಕಿಕೊಳ್ಳಿ, ಸಂಸ್ಕಾರಭರಿತ ಯೋಚನೆ ಯೋಜನೆ ಹಾಕಿಕೊಳ್ಳಿ. ಜನ ಜಾಗೃತಿ ವೇದಿಕೆಯ ವಲಯದ ಅಧ್ಯಕ್ಷ ಜಯರಾಮ್ ಶೆಟ್ಟಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬ್ರಹ್ಮಾವರ , ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಕೋಟ ವಲಯದ ಗಿಳಿಯಾರು ಕಾರ್ಯಕ್ಷೇತ್ರದ ಶ್ರೀ ಯಕ್ಷಿ ಜ್ಞಾನವಿಕಾಸ ಕೇಂದ್ರದ 3ನೇ ವರ್ಷದ ವಾರ್ಷಿಕೋತ್ಸವನ್ನು ಕೋಟ ಗ್ರಾಮಪಂಚಾಯತ ಅಧ್ಯಕ್ಷ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
Leave a Reply